ವೈದ್ಯಕೀಯ, ಪೊಲೀಸ್ ಸಿಬ್ಬಂದಿಗಳಿಗಾಗಿ 30 ಟನ್ ಕಲ್ಲಂಗಡಿ, ಪೇರಲ ಹಣ್ಣು ಖರೀದಿಸಿದ ಶಾಸಕ‌ ಸತೀಶ ಜಾರಕಿಹೊಳಿ

ವರದಿ: K. H ಪಾಮನಾಯಿಕ ಗೋಕಾಕ

ಜೀಲ್ಲಾ ಸುದ್ದಿಗಳು

ಯಮಕನಮರಡಿ ವರದಿ:ಮಾರಕ ಕೊರೊನಾ ಸೋ‌ಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟಕೀಡಾದ ರೈತರ ಬೆನ್ನೆಲುಬಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ನಿಂತಿದ್ದು, ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಸಾರ್ವಜನಿಕ ಹಂಚುತ್ತಿದ್ದಾರೆ.

ಇಂದು ಯಮನಕಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಎಂಬುವವರು ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದ 30 ಟನ್ ಕಲ್ಲಂಗಡಿ ಹಾಗೂ ಪೇರಲ ಹಣ್ಣು ಖರೀದಿಸಿದ್ದಾರೆ.

ಹೀಗೆ ಖರೀದಿಸಿದ ಹಣ್ಣುಗಳನ್ನು ಕೊರೊನಾ ವಿರುದ್ದ ನಿರಂತರವಾಗಿ ಹೋರಾಡುತ್ತಿರುವ ಯಮಕನಮರಡಿ ಹಾಗೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪೊಲೀಸ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಹಂಚಲಾಗುವುದು.

ಲಾಕ್ ಡೌನ್ ನಿಂದ ರೈತರು ಬೆಳೆದ ಫಸಲು ಮಾರಾಟ ಮಾಡಲಾಗದೆ ನಾಶ ಪಡಿಸುತ್ತಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣು, ತರಕಾರಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಾಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಇದೇ ರೀತಿ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು‌ ಕರೆ ನೀಡಿದ್ರು.

ಮೇ 3 ರ ಬಳಿಕ ಲಾಕ್ ಡೌನ್ ನ್ನು ಹಂತ ಹಂತವಾಗಿ ತೆರವುಗೊಳಿಸಬೇಕು. ಸಂಪೂರ್ಣ ಬಂದ್ ಮಾಡಲಾಗದು, ಕಾರ್ಖಾನೆ, ಕೃಷಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಮಲ್ಲಗೌಡಾ ಪಾಟೀಲ್‌ ಮಾಜಿ ಜಿಪಂ ಸದಸ್ಯ ಪರೇಶಗೌಡ, ಹೆಬ್ಬಾಳ ಜಿಪಂ ಸದಸ್ಯ ಮಹಾಂತೇಶ ಮಗದುಮ, ಕಿರಣ ರಜಪೂತ, ಸುಧೀರ್ ಗಿರಿಗೌಡ, ಅಪ್ಪಾಗೌಡ ಪಾಟೀಲ್, ರಾಜು ಅವಟೆ
ಸೇರಿದಂತೆ‌ ಜಿಲ್ಲಾ‌ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

Be the first to comment

Leave a Reply

Your email address will not be published.


*