ಜೀಲ್ಲಾ ಸುದ್ದಿಗಳು
ಬೈಲಹೊಂಗಲ – ಪ್ರತಿ ವರ್ಷ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಂತಾ 2 (ಎರಡು ಕೋಟಿ) ರೂ ಗಳನ್ನು ಮಿಸಲಾಗಿರುತ್ತದೆ. ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರದಿಂದಾಗಿ ದೇಶಾಧ್ಯಂತ ಲಾಕ್ ಡೊನ್ ಜಾರಿಯಾಗಿದ್ದು ಅದೇ ನಮ್ಮ ರಾಜ್ಯದಲ್ಲಿಯೂ ಕೂಲಿಕಾರ್ಮಿಕರು ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು. ಈಗಾಗಲೆ ಸರಕಾರ ಬಿ.ಪಿ.ಎಲ್. ಪಡಿತರದಾರರಿಗೆ ಅಕ್ಕಿ , ಗೋಧಿಯನ್ನು ಮಾತ್ರ ವಿತರಿಸುತ್ತಿದ್ದರೆ. ಜನರಿಗೆ ಸರಿಯಾಗಿ ಕೆಲಸವಿಲ್ಲದೆ ದಿನ ನಿತ್ಯ ದುಡಿಯುವ ಜನರು ಊಟದ ಇತರೆ ದಿನಸಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೆ 21 ದಿನಗಳ ಲಾಕ್ ಡೊನ್ ನಿಂದಾ ದಿನಗೂಲಿಗಳ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ ಬಿ.ಪಿ.ಎಲ್. ಬಡ ಕುಟುಂಬಗಳಿಗೆ 2000 ರಿಂದ 2500 ರೂ ಗಳ ಒಂದು ದಿನಸಿ ಕಿತ್ತು (ಎಣ್ಣೆ , ಹಿಟ್ಟು, ಕಾರ, ಸಕ್ಕರೆ ಇತರೆ ವಸ್ತುಗಳನ್ನು ಸೇರಿದ) ವಿತರಿಸಿದರೆ ಒಂದು ಕ್ಷೇತ್ರ ವ್ಯಾಪ್ತಿಯ ಎಲ್ಲ ಅರ್ಹ ಕುಟುಂಬಗಳು ನೆಮ್ಮದಿಯಾಗಿ ಜೀವನ ನಡೆಸಬಹುದು ಎಂದು ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ಹೇಳಿದ್ದಾರೆ . ಈ ಕಾರ್ಯದಲ್ಲಿ ಎಲ್ಲ ಶಾಸಕರು ಜವಾಬ್ದಾರಿಯನ್ನು ತೋರಿಸಿ ಜನಸಾಮಾನ್ಯರ ಜೀನವಾದಲ್ಲಿ ಬಂದೊಡಗಿರುವ ಆತಂಕವನ್ನು ದೂರಮಾಡಬೇಕೆಂದು ಮನವಿ.
Be the first to comment