ನಿಧನ ವಾತೆ೯ ಕೂಡ್ಲಿಗಿ ಹಿರೇಮಠದ ಶ್ರೀಮತಿಚನ್ನವೀರಮ್ಮ

ವರದಿ:- ವಿ.ಜಿ ವೃಷಭೇಂದ್ರ ಬಳ್ಳಾರಿ

ನಿಧನದ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೂಡ್ಲಿಗಿ ಹಿರೇಮಠದ (ಲಿಂಗೈಕ್ಯ ಶ್ರೀರೇವಣಸಿದ್ದಯ್ಯ ಶಾಸ್ತ್ರಿಗಳವರ ಧರ್ಮಪತ್ನಿ) ಶ್ರೀಮತಿ ಚನ್ನವೀರಮ್ಮನವರು (97)ಶುಕ್ರವಾರ ಏಪ್ರೇಲ್3ರಂದು ಬೆಳಿಗ್ಗೆ 12.30 ಕ್ಕೆ ದೈವಾದೀನರಾಗಿರುತ್ತಾರೆ. ಅವರು ಮಕ್ಕಳಾದ ನಿವೃತ್ತ ಜಿಲ್ಲಾವೈಧ್ಯಾಧಿಕಾರಿ ಕೆ.ಹೆಚ್.ಎಮ್. ಗಂಗಯ್ಯ. ವೈದಿಕಶಾಸ್ತ್ರೀಗಳಾದ ಕೆ.ಹೆಚ್.ಎಮ್.ಚಿದಾನಂದ ಸ್ವಾಮಿ.ಹಾಗೂ ಕೆ.ಹೆಚ್.ಎಮ್.ತಿಪ್ಪೇಸ್ವಾಮಿ ಮತ್ತು ಸೊಸೆಯಂದಿರನ್ನು. ಮೊಮ್ಮಕ್ಕಳನ್ನು.ಮರಿಮೊಮ್ಮಕ್ಕಳನ್ನು.ಗಿರಿಮೊಮ್ಮಕ್ಕಳನ್ನು. ಹಿರೇಮಠದ ಸಹೋದರರನ್ನು. ಅಪಾರ ಬಂಧು ಬಳಗ. ನೆಂಟರನ್ನು.ಶಿಷ್ಯವಗ೯ವನ್ನು ಹೊಂದಿದ್ದರು.ಅವರು ವಯೋಸಹಜ ಬಳಲಿಕೆಯಿಂದಾಗಿ ವಿಶ್ರಾಂತಿಯಲ್ಲಿದ್ದರು. *ಅಂತ್ಯಕ್ರಿಯೆ-* ಮೃತರ ಅಂತ್ಯಕ್ರಿಯೆಯನ್ನು ಏಪ್ರೇಲ್4 ಶನಿವಾರದಂದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ಮೃತರ ತೋಟದಲ್ಲಿ ಅಂತ್ಯಕ್ರಿಯೆ ಜರುಗಿಸಲಾಗುವುದೆಂದು ತಿಳಿದುಬಂದಿದೆ.

*ಸಂತಾಪ-*

ಶ್ರೀಮತಿ ಚನ್ನವೀರಮ್ಮರವರ ಅಗಲಿಕೆಗೆ ತಾಲೂಕು ಹಾಗೂ ಜಿಲ್ಲೆಯ ವಿವಿದ ಮಠಗಳ ಮಠಾಧೀಶರು.ಕೂಡ್ಲಿಗಿ ಹಿರೇಮಠದ ಸಹೋದರರು. ಬಂಧುಗಳು.ಸಮಾಜದ ವಿವಿದ ಗಣ್ಯರು.ಶಿಷ್ಯವಗ೯.ವಿವಿದ ಸಂಘ ಸಂಸ್ಥೆಗಳ ಪಾದಾಧಿಕಾರಿಗಳು.ಜನಪ್ರತಿ ನಿಧಿಗಳು.ವೀರಶೈವ ಸಮಾಜದ ಮುಖಂಡರು.ವಿವಿದ ಸಮಾಜಗಳ ದುರೀಣರು. ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*