ಸುರಪುರದ ಹಾಲಿ ಮತ್ತು ಮಾಜಿ ಶಾಸಕರ ಭೇಟಿಗೆ ಏಪ್ರಿಲ್ 14 ರವರೆಗೆ ನಿಷೇಧ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಸುರಪುರ:- ಸುರಪುರ ತಾಲೂಕಿನ ಜನತೆ ತಮ್ಮ ಕುಂದುಕೊರತೆಗಳನ್ನು ತೋಡಿಕೊಳ್ಳಲು ಸುರಪುರ ಕ್ಷೇತ್ರದ ಶಾಸಕ ರಾಜೂಗೌಡ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಸಾರ್ವತ್ರಿಕ ಭೇಟಿಗೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಂ ಪಾಟೀಲ್ ಅವರು ತಿಳಿಸಿದ್ದಾರೆ .

ಮಹಾಮಾರಿ ಕೊರೋನಾ ವೈರಸ್ ಲಾಕ್ ಡೌನ ಹಿನ್ನೆಲೆಯಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಪೊಲೀಸ್ ಇಲಾಖೆಯ ವತಿಯಿಂದ ಹಾಲಿ ಮತ್ತು ಮಾಜಿ ಶಾಸಕರ ಹಾಗೂ ಇತರ ಜನಪ್ರತಿನಿಧಿಗಳ ಮನೆಯ ಗೋಡೆಗೆ ಸಾರ್ವತ್ರಿಕ ತಿಳಿವಳಿಕೆ ಪತ್ರವನ್ನು ಅಂಟಿಸಲಾಗಿದೆ.

ಯಾದಗಿರಿ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಹಾಗೂ ಎಸ್ಪಿ ಹೃಷಿಕೇಶ್ ಭಗವಾನ್ ಮತ್ತು ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ಅವರ ಆದೇಶದ ಮೇರೆಗೆ ಹೆಚ್ಚು ಜನರು ಸೇರದಂತೆ ನೀತಿ ಅನುಸರಿಸಿ ಏಪ್ರಿಲ್ 14 ರವರೆಗೆ ಈ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಶಾಸಕ ರಾಜುಗೌಡ ಮಾತನಾಡಿ ಮಹಾಮಾರಿ ಕರೋನಾ ವೈರಸ್ ನಿಂದಾಗಿ ಇಡೀ ದೇಶವೇ ತತ್ತರಿಸಿಹೋಗಿದ್ದು ದೇಶದಾದ್ಯಂತ ಲಾಕ್ ಡೌನ ಮಾಡಲಾಗಿದೆ .

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಟ್ಟುನಿಟ್ಟಾಗಿ ಜನರು ಹೊರಗಡೆ ಬಾರದಂತೆ ಆದೇಶ ನೀಡಿದ್ದಾರೆ.
ನಾನು ಕೂಡ ನಮ್ಮ ಕ್ಷೇತ್ರದ ಜನತೆಯಲ್ಲಿ ಹೊರಗಡೆ ಬರದಿದ್ದರೆ ಸಾಕು ಹೆಮ್ಮಾರಿ ಕೊರೋನಾ ವನ್ನು ಹೋಗಲಾಡಿಸಲು ಸಾಧ್ಯ ಎಂದು ಕಳಕಳಿಯಿಂದ ಬೇಡಿಕೊಂಡಿದ್ದೇನೆ.

ಈಗಾಗಲೇ ನಾನು ಸುರಪುರ ಹಾಗೂ ಹುಣಸಗಿ ಯಲ್ಲಿ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ನಗರಸಭೆ, ಪುರಸಭೆ, ಆರೋಗ್ಯ ಇಲಾಖೆಯಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ಮಾಡಿದ್ದೇನೆ, ಯಾರಾದರೂ ತಮ್ಮ ನೋವುಗಳಿಗೆ ಸಿಲುಕಿದ ಕಷ್ಟದ ಸಂದರ್ಭದಲ್ಲಿ ನನಗೆ ಕಾಲ್ ಮಾಡಿ ಫೋನ್ನಲ್ಲಿ ಮಾತನಾಡಬಹುದು ಎಂದು ಹೇಳಿದರು.

Be the first to comment

Leave a Reply

Your email address will not be published.


*