ಲಿಂಗಸುಗೂರ್ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅನೀಮಿಯಾ ಮುಕ್ತ – ಪೌಷ್ಠಿಕ ಕರ್ನಾಟಕ ಅಭಿಯಾನ* ಕಾರ್ಯಕ್ರಮ ದಡಿಯಲ್ಲಿ ಅನೀಮಿಯಾ ಕುರಿತು ಅರಿವು, ಪರೀಕ್ಷೆ, ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆರೋಗ್ಯ ಅಧಿಕಾರಿ ಡಾ: ಅಮರೇಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ,
ಮುಖ್ಯ ವೈದ್ಯಾಧಿಕಾರಿ ಡಾ: ರುದ್ರಗೌಡ ಪಾಟೀಲ್,ಕಾಲೇಜು ಪ್ರಾಚಾರ್ಯ ರಾದ ಶ್ರೀ ಮುರುಘೇಂದ್ರಪ್ಪ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಡಾ:ರುದ್ರಗೌಡ ಪಾಟೀಲ್ ಮಾತನಾಡಿ 5 ವರ್ಷದೊಳಗಿನ ಮಕ್ಕಳು ಹಾಗೂ 19 ವರ್ಷದೊಳಗಿನ ಎಲ್ಲಾ ಹದಿಹರೆಯದ ವಯಸ್ಸಿನ ವರಲ್ಲಿ ರಕ್ತ ಹೀನತೆ ಕಂಡುಬರುತ್ತದೆ ಇದರಿಂದ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ.
ಅಭ್ಯಾಸದಲ್ಲಿ ನಿರಾಸಕ್ತಿ, ಮತ್ತು ಕಿಶೋರಿಯರಿಗೆ ಮುಂದಿನ ತಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಯಾಗುತ್ತದೆ. ಆದ್ದರಿಂದ ಎಲ್ಲರೂ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಬೇಕು ,ಪೌಷ್ಠಿಕ ಆಹಾರ ಸೇವನೆ, ವೈದ್ಯರ ಸಲಹೆ ಪಾಲಿಸಲು ತಿಳಿಸಿದರು.
ಡಾ: ಅಮರೇಶ್ ಪಾಟೀಲ್ ರವರು ಮಾತನಾಡುತ್ತಾ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಅಭಿಯಾನ ಯಶಸ್ವಿಗೊಳಿಸಲು ಕೋರಿದರು ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜನಾರೋಗ್ಯ – ಆರೋಗ್ಯ ಕರ್ನಾಟಕ ಯೋಜನೆ ಯಲ್ಲಿ ಎಲ್ಲರೂ ನೋಂದಣಿ ಮಾಡಿಸಲು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು ವಾರ್ಷಿಕ 5 ಲಕ್ಷ ವರೆಗೆ ಉಚಿತ ಆರೋಗ್ಯ ಸೇವೆ, ಎಪಿಎಲ್ ಕಾರ್ಡ್ ದಾರರು 1.5 ಲಕ್ಷ ವರೆಗೆ ಸರಕಾರಿ ಹಾಗೂ ನೊಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್ ಜೋಶಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕ ಸೋಮಶೇಖರ ಬಳಗಾನೂರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಇಲಾಖೆಯ ಸಿ.ಎ.ಮೇಟಿ. ಮೌನೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯ ಗುರುಬಸ್ಸಮ್ಮ, ಆರೋಗ್ಯ ಇಲಾಖೆಯ ಡಾ: ಶಂಕರಾಚಾರ್ಯ, ಶಿವಕುಮಾರ್, ಮಂಜುನಾಥ್, ಸಾಧಿಕ್,ಗಣೇಶ್,ಸಿದ್ರಾಮಯ್ಯ, ಅಮರೇಶ್, , ಸವಿತಾ. ಜ್ಯೋತಿ, ಇಮಾಂಬಿ, ವಸೀಂರೆಹಮಾನ್, ಅಕ್ತರ್ ಪಾಶಾ,ಕಾಲೇಜು ಉಪನ್ಯಾಸಕರು ಆಶಾಕಾರ್ಯಕರ್ತರು ,ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
Be the first to comment