ಸಿಡಿಪಿಓ .ಇಲಾಖೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ. ದಲಿತ ಮುಖಂಡ .ಬಸವರಾಜ ಮರಳಿ ಆರೋಪ

ಲಿಂಗಸುಗೂರ ತಾಲೂಕಿನ 540 ಅಂಗನವಾಡಿ ಕೇಂದ್ರಗಳ ಮುಖಾಂತರ ಗರ್ಭಿಣಿಯರು, ಬಾಣಂತಿಯರು ಮಕ್ಕಳಿಗೆ ಎಮ್ಎಸ್‌ಪಿಸಿ ಏಜನ್ಸಿ ಮುಖಾಂತರ ವಿತರಣೆ ಮಾಡುವ ಕಳಪೆ ಪೌಷ್ಠಿಕ ಆಹಾರ ಮೊಟ್ಟೆಗಳ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಪ್ರತಿ ತಿಂಗಳು ಲಕ್ಷಾನುಗಟ್ಟಲೆ – ಹಣ ಲೂಟಿಯಾಗಿದ್ದು, ಕಾರಣ ಸಮಗ್ರ ತನಿಖೆ ನೆಡಸಿ ಅವ್ಯವಹಾರದಲ್ಲಿ ಭಾಗಿಯಾದ ಲಿಂಗಸುಗೂರ ಸಿಡಿಪಿಓ ಹಾಗೂ ತಾ.ಪಂ ಇಓ ಮತ್ತು ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಉಪನಿರ್ದೆಶಕರು ಇತರೆ ಅಧಿಕಾ- ರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ದಲಿತ ಮುಖಂಡ ಬಸವರಾಜ ಮರಳಿ – ಒತ್ತಾಯಿಸಿ ಆರೋಪಿಸಿದ್ದಾರೆ.

ಲಿಂಗಸುಗೂರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ವಿತರಿಸುವ ಎಮ್ ಎಸ್ ಪಿ ಸಿ 2021ರಿಂದ 23 ಮಾರ್ಚವರಗೆ ಸುಳ್ಳು ದಾಖಲೆ ಸಲ್ಲಿಸಿ ಪ್ರತಿ ತಿಂಗಳು 1 ಕೋಟಿರೂ ಬಿಲ್ ತಾಪಂ ಪಾವತಿಸಿದ್ದು
2023 ಏಪ್ರಿಲನಿಂದ ಆನಲೈನ ಬಿಲ್ ಮಾಡಿತ್ತಿದ್ದು ಈಗ ಪ್ರತಿತಿಂಗಳು 80 ಲಕ್ಷರೂ ಪಡೆಯಲಾಗುತ್ತಿದ್ದು, ಉಪನಿರ್ದೇಶಕರ ಒಪ್ಪಿಗೆ ಮೆರೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರ್ದೆಶಕರ ಪಾವತಿಸುತ್ತಾರೆ. ಆದರೆ, ಹಲವಾರು ವರ್ಷಗಳಿಂದ ಹಣ ಲೂಟಿ ಮಾಡಿದ ಏಜನ್ಸಿ ಹಾಗೂ ಅಧಿಕಾ- ರಿಗಳ ವಿರುದ್ಧ ಇಲ್ಲಿಯವರೆಗೆ ಏಕೆ ಕ್ರಮ ಜರುಗಿಸಿಲ್ಲಾ ಎಂದು ಅವರು ಹೇಳಿದರು.

ಅಂಗನವಾಡಿ ಕೇಂದ್ರಗಳಿಗೆ ಸರಬರಾಜ ಮಾಡುವ ಪೌಷ್ಠಿಕ ಆಹಾರ ಕಳಪೆ ಗುಣ ಮಟ್ಟದಾಗಿದ್ದು, ಬಿಐಎಸ್ ತಂತ್ರಜ್ಞಾನ ಹೊಂದಿರುವದಿಲ್ಲಾ. ಅಲ್ಲದೆ ಕಡಿಮೆ ತೂಕದ ಡೇಟ ಬಾರ ಆಹಾರ ವಿತರಿಸಲಾಗುತ್ತಿದ್ದು, ಅದು ನಿಗದಿತ ತಿಂಗಳಿನಲ್ಲಿ ವಿತ- ರಿಸದೆ ವರ್ಷಕ್ಕೆ 11 ತಂಗಳು ಮಾತ್ರ ನೀಡಲಾಗುತ್ತದೆ ಹಾಗೂ ಕೇಂದ್ರಗಳಿಗೆ ವಿತರಿಸುವ ಮೊಟ್ಟೆಗಳು ಕಳಪೆ ಗುಣಮಟ್ಟದ ಕಡಿಮೆ ತೂಕದ್ದಾಗಿದೆ ಎಂದರು. ಮುಖಂಡ ಮಲ್ಲಿಕಾರ್ಜುನ ಇದ್ದರು.

Be the first to comment

Leave a Reply

Your email address will not be published.


*