ಲಿಂಗಸುಗೂರು, ನ.29-ಕಕ್ಷಿದಾರರ ಮನೆ ಬಾಗಿಲಿಗೆ ನ್ಯಾಯಾಂಗ ವ್ಯವಸ್ಥೆ ತೆಗೆದುಕೊಂಡು ಹೋಗುವ ಸದು ದ್ದೇಶದಿಂದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಂಚಾರಿ ಪೀಠ 2 ಡಿಸೆಂಬರ್ 23 ರಂದು ಗೌರವಾನ್ವಿತ ನ್ಯಾಯ ಮೂರ್ತಿ ರವಿ ವಿ. ಹೊಸಮನಿ ಯವರು ಉದ್ಘಾಟಿಸಲ್ಲಿದ್ದಾರೆಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆಶಿಕ್ ಅಹ್ಮದ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಜಿಲ್ಲಾ ನ್ಯಾಯಾಲಯ ಮಂಜೂರು ರಾಗಿದ್ದು, ಮುಂದಿನ ದಿನಗಳಲ್ಲಿ ಖಾಯಂ ಪೀಠ ಮಂಜೂರಾಗುತ್ತದೆ
ಅಲ್ಲದೇ ತಾಲೂಕನ್ನು ಜಿಲ್ಲಾ ಕೇಂದ್ರ ವನ್ನಾಗಿ ಘೋಷಿಸಬೇಕೆಂದು ಒತ್ತಾ ಯಿಸಿ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಾಗುವುದು.
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಂಜೂರಿಗಾಗಿ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ವಿ.ಪಾಟೀಲ್ ತುಂಬ ಶ್ರಮಿಸಿದ್ದಾರೆ. 2 ರಂದು ಉದ್ಘಾಟನಾ ಸಮಾರಂಭಕ್ಕೆ ಸಂಸದರು ಶಾಸಕರು
ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾ ದ ಮಾರುತಿ ಶಿ. ಬಾಗ ಡೆ, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಬಸಪ್ಪ ಬಿ. ಜಕಾತಿ, ಚಂದ್ರಶೇಖರ ಪಿ. ದಿಡ್ಡಿ ಹಿರಿಯ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ. ಲಿಂಗಸುಗೂರು ಸೇರಿ ನ್ಯಾ ಯಾದೀಶರು ವಕೀಲರು ಭಾಗವಹಿಸಲ್ಲಿದ್ದಾರೆ.
ಕಾರಣ ಸಾರ್ವಜನಿಕರು ಈ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯ ಆಗಮಿಸಿ ಸಮಾರಂಭವನ್ನು ಯಶಸ್ವಿ ಗೊಳಿಸಬೇಕೆಂದು ಮಾಡಿದರು. ಮನವಿ
ಈ ವೇಳೆ ವಕೀಲರಾದ ಮಧು ನಾಡಗೌಡ, ಕುಪ್ಪಣ್ಣ, ಸೂಯ೯ ಚಂದ್ರ, ನಾಗರಾಜ ಎಲಿಗಾರ, ಕುಪ್ಪಣ್ಣ ಮಾಣಿಕ್, ಅಮರಗುಂಡಪ್ಪ ಸೇರಿ ಇತರರು ಉಪಸ್ಥಿತರಿದ್ದರು.
Be the first to comment