ಕಾಂಗ್ರೇಸ್ ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ ಬಿರುಸಿನ ಪ್ರಚಾರ

ಮಸ್ಕಿ, ತಾಲೂಕಿನ ಕನ್ನಾಳ ಪಂಚಾಯತಿ ವ್ಯಾಪ್ತಿಯ ಮೂಡಲದಿನ್ನಿ ತಾಂಡ , ಸುಲ್ತಾನಪೂರ , ತಿಮ್ಮಾಪೂರ , ಕನ್ನಾಳ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ ರವರು ಬಿರುಸಿನ ಪ್ರಚಾರ ನಡೆಸಿದರು.

 

 

ಕನ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡಲ ದಿನ್ನಿ ತಾಂಡಾ,ಸುಲ್ತಾನಪೂರ , ತಿಮ್ಮಾಪೂರ , ಕನ್ನಾಳ ಗ್ರಾಮಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ ಬಿರುಸಿನ ಪ್ರಚಾರ ಜೋರಾಗಿಯೇ ನಡೆಸಿದರು. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲಾ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಭರವಸೆ ನೀಡಿ ಪ್ರಚಾರದ ಕರಪತ್ರ ಹಾಗೂ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು.ನಂತರ ಮಹಿಳೆಯರು ಪ್ರಚಾರ ಮಾಡುತ್ತಾ ಕುಣಿದು ಕುಪ್ಪಳಿಸಿ ಪ್ರಚಾರಕ್ಕೆ ಸಾಥ್ ನೀಡಿದರು.

 

ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರು,ಗ್ರಾಮದ ಪ್ರಮುಖ ಮುಖಂಡರು,ರೈತ ಭಾಂದವರು ಸೇರಿದಂತೆ ಇನ್ನಿತರರು ಇದ್ದರು.

Be the first to comment

Leave a Reply

Your email address will not be published.


*