ಪುಟ್ಬಾಲ್ ಪಕ್ಷದ ಅಭ್ಯರ್ಥಿ ರುದ್ರಯ್ಯ ಚಿಕ್ಕ್ ಮಕ್ಕಳಿಂದ ಪ್ರಚಾರ . ನಿದ್ರಾವಸ್ಥೆಗೆ ಜಾರಿದ ಅಧಿಕಾರಿಗಳು 

ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಕೆ ಮಾಡಿಕೊಂಡ ಲಿಂಗಸುಗೂರ ಮೀಸಲು ಮತಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಆರ್.ರುದ್ರಯ್ಯ್ ತಮ್ಮ ಚುನಾವಣಾ ಪ್ರಚಾರಕ್ಕೆ ಚಿಕ್ಕ ಚಿಕ್ಕ ಮಕ್ಕಳನ್ನು ಚುನಾವಣಾ ಪ್ರಚಾರದ ಬಿತ್ತಿ ಪತ್ರಗಳನ್ನು ಹಂಚುತ್ತಿರುವ ಮನೆ ಮನೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿದ್ರಾವಸ್ಥೆಗೆ ಜಾರಿದ್ದಾರೆ !

 

ಲಿಂಗಸುಗೂರ ಮೀಸಲು ಕ್ಷೇತ್ರದ ಲಿಂಗಸುಗೂರ ಪಟ್ಟಣದ 18 ನೇ ವಾರ್ಡ ನಲ್ಲಿ ಅದು ಸಹಾಯಕ ಆಯುಕ್ತರ ಕಚೇರಿ ಸುತ್ತ ಮುತ್ತ ಮನೆಗಳಲ್ಲಿ ಅಂಗಡಿಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಚುನಾವಣೆ ಪ್ರಚಾರದಲ್ಲಿ ತೊಡಗಿರುವದು ಚುನಾವಣಾ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಪಟ್ಟಣದ ಸಾರ್ವಜನಿಕ ರು. ಆರೋಪಿಸುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಕರೆತಂದು ಭರ್ಜರಿ ಚುನಾವಣಾ ಪ್ರಚಾರ ಮಾಡಿಕೊಂಡಿದ್ದಾರೆ. ಏನು ಅರಿಯದ ಮಕ್ಕಳು ಅಭ್ಯರ್ಥಿ ಗಳ ಮಾತಿಗೆ ತಲೆ ಆಡಿಸಿ ಮನೆ ಮನೆಗೆ ಹೋಗಿ ಕರಪತ್ರ ವಿತರಣೆ ಮಾಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟೋಪಿ ಹಾಗೂ ಶಾಲು ಧರಿಸಿರುವ ಮಕ್ಕಳ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ.

Be the first to comment

Leave a Reply

Your email address will not be published.


*