ವಿದ್ಯುತ್ ಕಂಬಕ್ಕೆ ಸುತ್ತಿಕೊಂಡ ಬಳ್ಳಿ: ಕರೆಂಟ ಕಣ್ಣಾ ಮುಚ್ಚಾಲೆಗೆ ಬೇಸತ್ತ ನಾರಾಯಣಪುರ ಸುತ್ತಮುತ್ತಲಿನ ಗ್ರಾಮಸ್ಥರು

ನಾರಾಯಣಪುರ : ಬಸವಸಾಗರ ಜಲಾಶಯದ ಸಮೀಪದ ನಾರಾಯಣಪುರ ಸುತ್ತ ಮುತ್ತಲ್ಲ ಅನೇಕ ಗ್ರಾಮಗಳಲ್ಲಿ ವಿದ್ಯುತ್ ತಂತಿಗಳಿಗೆ ಬಳ್ಳಿಗಳು ಸುತ್ತಿಕೊಂಡಿದ್ದವೆ ಹಾಗೂ ಕರೆಂಟ್ ಲೈನಗಳ ಮೇಲೆ ಮರದ ಕೊಂಬೆಗಳು ಜೋಕಾಲಿ ರೀತಿಯಲ್ಲಿ ತೆಲಾಡುತ್ತಿದ್ದರು ನಾರಾಯಣಪುರ ಕೆಇಬಿ ಲೈನಮನಗಳು ಮತ್ತು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.





ನಾರಾಯಣಪುರ ಮತ್ತು ಕೊಡೆಕಲ್ಲಗೆ ಹೋಗುವ ಮುಖ್ಯ ರಸ್ತೆ ಬದಿಯಲ್ಲಿರುವ ಮುಖ್ಯ ಲೈನ ತಂತಿಗಳು ಕಾಣಿಸದಂತೆ ಇಡೀ ವಿದ್ಯುತ್ ತಂತಿ ಕಂಬಗಳಿಗೆ ಬಳ್ಳಿಗಳು ಆವರಿಸಿಕೊಂಡಿದ್ದು ರೈತರ ಪಂಪ ಸೆಟ್ ಗಳಿಗೆ ಮತ್ತು ಗ್ರಾಮಗಳಿಗೆ ವಿದ್ಯುತ್ ನಿರಂತರ ಬರುವುದು ಹೋಗುವುದು ಮಾಡುತ್ತಿರುವುದರಿಂದ ದೂರು ನೀಡಿದರೂ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ ಎಂದು ಸುತ್ತಮುತ್ತಲಿನ ಗ್ರಾಮಗಳ ಜನರು ಕಿಡಿಕಾರಿದ್ದಾರೆ.

ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಬಳ್ಳಿಗಳು ನೆಲದಿಂದ ವಿದ್ಯುತ್ ಕಂಬದ ತಂತಿವರೆಗೂ ಚಾಚಿಕೊಂಡು ತಂತಿ ಸುತ್ತಿಕೊಂಡಿವೆ. ಮಳೆ ಪರಿಣಾಮ ತಂತಿಗಳ ಮೂಲಕ ಗ್ರೌಂಡ್ ಆಗುತ್ತಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ. ಮಳೆ ಬಂದಾಗ ವಿದ್ಯುತ್ ಕಂಬದ ಬಳಿ ರೈತರು,ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಉಂಟಾಗಿದ್ದು ಇನ್ನಾದರೂ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಕ್ಕೆ ಹಬ್ಬಿರುವ ಬಳ್ಳಿನ ತೆರವುಗೊಳಿಸಬೇಕು ಎಂದು ನಾರಾಯಣಪುರ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ. ನೀರಾವರಿ ಮತ್ತು ಜಲಾನಯನ ಪ್ರದೇಶವಾಗಿರುವದರಿಂದ ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಅತೀ ಹೆಚ್ಚು ಡೆಂಗ್ಯೂ ಚಿಕನ್‌ ಗುನ್ಯ ಉಲ್ಬಣುಸಿತ್ತಿದ್ದೆ ಯಾದಗಿರಿ ಜೆಸ್ಕಾಂ ಅಧಿಕಾರಿಗಳು ನಾರಾಯಣಪುರ ವಲಯದ ಕೆಇಬಿ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡು ರೈತ ಮತ್ತು ಜನರ ಸಮಸ್ಯೆ ಗೆ ಪರಿಹಾರ ಕಂಡುಕೋಳಬೇಕು.

Be the first to comment

Leave a Reply

Your email address will not be published.


*