ಸಾವಿತ್ರಿಬಾಯಿ ಫುಲೆ ಚಲನಚಿತ್ರ ವೀಕ್ಷಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಸಾಮಾಜಿಕ ಕಳಕಳಿ ಚಿತ್ರ ಉಳ್ಳ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿಯು ಆಗಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಗು ಅಕ್ಷರ ಕಲಿಸಿದ ಮಹಾತಾಯಿಯ ಜೀವನ ಆದಾರಿತ ಸಾವಿತ್ರಿಬಾಯಿ ಫುಲೆ ಚಿತ್ರವನ್ನು ಪೂಜ್ಯ ಶ್ರೀ ಮ.ನಿ.ಪ್ರ.ಶಿವುಕುಮಾರ ಮಹಾಸ್ವಾಮಿಗಳು, ಸಿದ್ದಲಿಂಗೆಶ್ವರ ವಿರಕ್ತಿಮಠ ಮನ್ನಿಕಟ್ಟಿ,ಶ್ರೀ ಮ.ನಿ.ಪ್ರ.ಡಾ|| ಬಸವಲಿಂಗ ಮಹಾಸ್ವಾಮಿಗಳು ಶಿವಯೋಗ ಹಾಗೂ ನಿಸರ್ಗ ಚಿಕಿತ್ಸೆ ಕೇಂದ್ರ ಚಿತ್ತರಗಿ ಸಂಸ್ಥಾನಮಠ ಶಿರೂರ ಇವರು ಉದ್ಘಾಟಿಸಿದರು.

ಪರಮಪೂಜ್ಯ ಜಗನ್ನಾಥ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮಳೆರಾಜೆಂದ್ರ ಮುರನಾಳ ಇವರು ಸಾಯಂಕಾಲ 5-30 ಉಚಿತ ಪ್ರದರ್ಶನ ಉದ್ಘಾಟಿಸಿದರು.

ಎಲ್ಲಾ ಶಿಕ್ಷಕರಿಗೆ ಹಾಗೂ ಸಾವಿತ್ರಿಬಾಯಿ ಫುಲೆ ಅಭಿಮಾನಿಗಳಿಗೆ ಉಚಿತ ಪ್ರದರ್ಶನ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಘನಶಾಮ ಬಾಂಡಗೆ,ವಿಜಯ ಸುಲಾಖೆ, ಶಿವು ಮೇಲ್ನಾಡ, ಬಸವರಾಜ ಕಟಗೇರಿ,ರಾಜು ಗೌಳಿ,ಅರುಣ ಲೊಕಾಪೂರ, ಹಾಗೂ ಶಿಕ್ಷಕರು ನಗರದ ಗಣ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*