ಯಾದಗಿರಿ :: ಶಹಾಪುರ-ಯಾದಗಿರಿ ಮುಖ್ಯ ರಸ್ತೆಗೆ ಅಡ್ಡಲಾಗಿ ರೈಲ್ವೆ ಇಲಾಖೆ ನಿರ್ಮಿಸಿದ ಸೇತುವೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಮಳೆ ಬಂದರೆ ಸಾಕು ಪ್ರಯಾಣಿಕರು ಸಂಚರಿಸಲು ಹರ ಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿ,ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನರ ಪ್ರಯಾಣಕ್ಕೆ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗುವ ಉದ್ದೇಶದಿಂದ 257 ಕಿಲೋ ಮೀಟರ್ ಉದ್ದದ 1922 ಕೋಟಿ ವೆಚ್ಚದ ವಾಡಿ-ಗದಗ ರೈಲ್ವೆ ಮಾರ್ಗ ಕಾಮಗಾರಿ ಪ್ರಾರಂಭಗೊಂಡಿದೆ.
ಶಹಾಪುರಕ್ಕೆ ಸಮೀಪವಿರುವ ಈ ಮಾರ್ಗದ ಸೇತುವೆಯು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಬೈಕ್, ಆಟೋ,ಕಾರ್ ಸೇರಿದಂತೆ ಸಣ್ಣ ಗಾತ್ರದ ವಾಹನ ಪ್ರಯಾಣಿಕರು ಸಂಚರಿಸಲು ಪರದಾಡುತಿದ್ದು. ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದು
ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಇತ್ತ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು ಸಮಸ್ಯೆ ಪರಿಹಾರ ಕಂಡುಕೊಳ್ಳಲು ವಿಫಲರಾಗಿದ್ದಾರೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಕಾಮಗಾರಿಯ ಹೊಣೆ ಹೊತ್ತ ಅಧಿಕಾರಿ ಮತ್ತು ಗುತ್ತೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಅವೈಜ್ಞಾನಿಕ ಸೇತುವೆಯನ್ನು ಪುನಃ ನಿರ್ಮಾಣ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ( ಸಂಯೋಜಕ ) ಜಿಲ್ಲಾ ಅಧ್ಯಕ್ಷ ರಾಯಪ್ಪ ಸಾಲಿಮನಿ ಆಗ್ರಹಿಸುತ್ತಿದ್ದಾರೆ.
ಈ ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಸಂಪರ್ಕಿಸಿದರು ಕರೆ ಸ್ವೀಕರಿಸುತ್ತಿಲ್ಲ ಎಂದುಬುದುವು ಜನರ ಆಕ್ರೋಶಕ್ಕೆ ಕಾರಣವಾಗಿದೆ.
Be the first to comment