ನಕಲಿ ರಸಗೊಬ್ಬರ ಮಾರಾಟ : ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹ

ಸುರಪುರ 27 ಜು : ಸುರಪುರ ತಾಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ ನಕಲಿ ರಸಗೊಬ್ಬರ ಮಾಡುತ್ತಿರುವದನ್ನು ಖಂಡಿಸಿ ಕ.ರ.ವೇ ಗ್ರಾಮ ಘಟಕದ ವತಿಯಿಂದ ರಸಗೊಬ್ಬರ ಮಳಿಗೆಯ ಮುಂದೆ ಪ್ರತಿಭಟನೆ ನಡೆಸಿದರು.

ಮಾಚಗುಂಡಾಳ ಗ್ರಾಮದ ರೈತ ಶಿವಪ್ಪ ನಾಗನಟಿಗಿ ಎಂಬುವರು ಕಳೆದ ಮೂರು ದಿನಗಳ ಹಿಂದೆ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ 10- 26 -26 ಹಾಗೂ 17 -17 – 17 ರಸ ಗೊಬ್ಬರವನ್ನು ಪ್ರತಿ ಚೀಲಕ್ಕೆ 1450 ರೂ.ಗಳಂತೆ ಸುಮಾರು 10 ಕ್ಕೂ ಹೆಚ್ಚು ಚೀಲಗಳನ್ನು ಖರೀದಿಸಿದ್ದರು .

 

ಖರೀದಿಸಿದ ನಂತರ ರೈತ ಜಮೀನಿನಲ್ಲಿ ಹತ್ತಿ ಬೆಳೆಗೆ ಗೊಬ್ಬರ ಬಿತ್ತಲು ಹೋದಾಗ ಗೊಬ್ಬರದಲ್ಲಿ ಮರಳು ಮತ್ತು ಮಣ್ಣು ಮಿಶ್ರಿತ ನಕಲಿ ಗೊಬ್ಬರ ಇರುವುದು ಕಂಡು ಬಂದಿದೆ .

ಕೂಡಲೇ ಆತಂಕಗೊಂಡು ರೈತ ಕ.ರ.ವೇ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ರವರನ್ನು ಸಂಪರ್ಕಿಸಿದ್ರು, ಕೂಡಲೇ ರೈತನೊಡನೆ ಗೊಬ್ಬರ ಚೀಲದೊಂದಿಗೆ ಸುರಪೂರದ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದಾರೆ .

ಅಧಿಕಾರಿಗಳು ಪರಿಶೀಲಿಸಿದಾಗ ರಸಗೊಬ್ಬರ ನಕಲಿ ಇರುವದು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಇಂದು ಬೆಳಿಗ್ಗೆ ಸುರಪೂರ ಪೋಲಿಸ್ ಇನ್ಸಪೆಕ್ಟರ್ ಸುನಿಲ್ ಮೂಲಿಮನಿ .ಹಾಗೂ ಕೃಷಿ ಅಧಿಕಾರಿ ಗುರುನಾಥ ಹಾಗೂ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಭೇಟಿ ನೀಡಿ ಕ್ರಮ ಜರುಗಿಸಿದ್ದಾರೆ.

Be the first to comment

Leave a Reply

Your email address will not be published.


*