ಭಟ್ಕಳ :
ನಗರದ ಮಧ್ಯ ಭಾಗದಲ್ಲಿ ಶಕ್ತಿ ದೇವತೆಯಾಗಿ ಪುಜೆಗೂಳ್ಳುವ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿ ವರ್ಷ ಆಷಾಢ ಮಾಸದ ಅಮವಾಸ್ಯೆಯ ಮೊದಲ ಬುಧವಾರ ಮತ್ತು ಗುರುವಾರ ಜಾತ್ರೆ ನಡೆಯುವ ವಾಡಿಕೆ .ನಿನ್ನೆ ಮತ್ತು ಇಂದು ನಡೆದ ಜಾತ್ರೆ ಮಹೋತ್ಸವದಲ್ಲಿ ಭಟ್ಕಳವಲ್ಲದೆ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಹೊತ್ತ ಹರಕೆಗಳನ್ನು, ಹೂವಿನ ಹಾರಗಳನ್ನು , ಹಣ್ಣು ಕಾಯಿ ಕಾಣಿಕೆ , ವಿಷೇಶವಾಗಿ ಕಣ್ಣಿನ ಬೇನೆ ಬರದಿರುವಂತೆ ಬೆಳ್ಳಿಯ ಜೋಡಿ ಕಣ್ಣುಗಳನ್ನು ಸಮರ್ಪಿಸುವ ವಾಡಿಕೆ ಇದೆ.
ಕಳೆದೇರಡು ದಿನಗಳಲ್ಲಿ ಶಾಸಕ ಸುನಿಲ್ ನಾಯ್ಕ , ಮಾಜಿ ಶಾಸಕ ಮಂಕಾಳ ವೈದ್ಯ, ಬಿಜೆಪಿ ಮುಖಂಡರಾದ ಈಶ್ವರ ನಾಯ್ಕ, ಭಟ್ಕಳ ಮತ್ತು ಹೋನ್ನಾವರದ ತಹಶಿಲ್ದಾರರು ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿದಂತೆ ಸರಿ ಸುಮಾರು 25 ರಿಂದ 30 ಸಾವಿರದಷ್ಟು ಭಕ್ತರು ಆಗಮಿಸಿ ಶ್ರೀ ದೇವಿ ದರ್ಶನ ಪಡೆದು ಕೃತಾರ್ಥರಾದರು.
ಗುರುವಾರ ಸಂಜೆ 4-25 ಕ್ಕೆ ಶ್ರೀ ದೇವಿಯ ಹಿಂದೂ ಸಮಾಜದ ಸರ್ವರಿಗೂ ಮಂಗಳವನ್ನುಂಟು ಮಾಡುವಂತೆ ಹಾಗೂ ಆಡಳಿತ ಮಂಡಳಿತ ಭವಿಷ್ಯದ ಯೊಜನೆಗಳು ಪೂರ್ಣಗೊಳ್ಳುವಂತೆ ವಿಷೇಶ ಪ್ರಾರ್ಥನೆ ಸಲ್ಲಿಸಿ ವಿಸರ್ಜನಾ ಪೂಜೆಯನ್ನು ಸಮರ್ಪಿಸಲಾಯಿತು.
ನಂತರ 4-30 ಕ್ಕೆ ಮಾರಿಕಾಂಬಾ ದೇವಸ್ಥಾನದ ಮಾರಿಗದ್ದುಗೆಯಿಂದ ಶ್ರೀ ದೇವಿಯನ್ನು ಭಕ್ತರು ತಲೆಯ ಮೇಲೆ ಹೊತ್ತು ಜಟ್ಟಪ್ಪ ನಾಯ್ಕ ಬಸ್ತಿ, ಮಿಸ್ಭಾ ರಸ್ತೆ, ಹಳೆ ಬಸ್ ನಿಲ್ದಾಣ, ಬಂದರ್ ರೋಡ್, ಹನುಮಾನ್ ನಗರ್ ಮಾರ್ಗವಾಗಿ ಜಾಳಿ ಕೋಡಿಯ ಸಮುದ್ರ ಕಿನಾರೆಯ ವರೆಗಿನ ಸುಮಾರು 6 ಕಿಮೀ ಮಾರ್ಗದಲ್ಲಿ ಮೆರವಣಿಗೆ ತಲುಪಿತು. ನಂತರ ಅಲ್ಲಿ ಸಂಪ್ರದಾಯದಂತೆ ತೆಂಗಿನ ಮರದ ಸೂಡಿಯನ್ನು ತಂದು ದೇವಿಯನ್ನು ವಿಸರ್ಜನಾ ಪ್ರದೇಶಕ್ಕೆ ಕರೆದೊಯ್ಯಲಾಯಿತು.
ಅರ್ಚಕರಿಂದ ಸಮುದ್ರ ದೇವರಿಗೆ ಪೂಜೆ ನೆರವೇರಿ ನಂತರ ಮಾರಿ ಮೂರ್ತಿಗೂ ಅಂತಿಮ ಪೂಜೆ ಸಲ್ಲಿಸಿದ ಬಳಿಕ ಮಣ್ಕುಳಿಯ ವೆಂಕಟ್ರಮಣ ನಾಯ್ಕ ಮತ್ತು ಸುರೇಶ ನಾಯ್ಕ ವಂಶಪಾರಂಪರ್ಯವಾಗಿ ದೇವಿಗೆ ಹಾಕುವ ಬೆಳ್ಳಿಯ ಕಣ್ಣುಗಳನ್ನು ಜಾತ್ರೆಯ ಮೂರ್ತಿಯಿಂದ ಪ್ರತ್ಯೇಕಿಸಿದ ನಂತರ ದೇವಿಯ ಮೂತ್ರಿಯ ಅವಯವಗಳನ್ನು ಪ್ರತ್ಯೇಕಿಸಿ ಸಮುದ್ರದಲ್ಲಿ ವಿಸರ್ಜಿಸುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.
ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಸುನಿಲ್ ನಾಯ್ಕ , ಆಡಳಿತ ಮಂಡಳಿಯ ಅಧ್ಯಕ್ಷರಾದ ಪರಮೇಶ್ವರ ನಾಯ್ಕ, ಕಾರ್ಯದರ್ಶಿ ಶ್ರೀಧರ ನಾಯ್ಕ ಸದಸ್ಯರಾದ. ನರೇಂದ್ರ ನಾಯಕ, ಶಂಕರ ಶೆಟ್ಟಿ, ಸುರೇಶ ಆಚಾರ್ಯ, ವಾಮನ ಶಿರಸಾಟ,ಮಾದೇವ ಮೊಗೇರ, ಕೃಷ್ಣ ಆರ್ ಮಹಾಲೆ, ಸುರೇಂದ್ರ ಭಟ್ಕಳಕರ, ಶ್ರೀಕಾಂತ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ , ಕನ್ನಡಪರ ಹೋರಾಟಗಾರ ಈರ ನಾಯ್ಕ ಚೌತನಿ ಸೇರದಂತೆ 3 ರಿಂದ 4 ಸಾವಿರ ಭಕ್ತರು ಪಾಲ್ಗಂಡಿದ್ದರು. ಮೆರವಣಿಗೆಯಲ್ಲಿ ಯಾವುದೇ ರೀತಿ ಅಹಿತರ ಘಟನೆ ನಡೆಯದಂತೆ ಎಡಿಶನಲ್ ಎಸ್ಪಿ ಎಸ್ ಬದ್ರಿನಾಥ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಕೆ ಬೆಳ್ಳಿಯಪ್ಪ ಸೇರಿದಂತೆ ನಗರ ಸಿಪಿಆಯ್ ದಿವಾಕರ್, ಗ್ರಾಮಿಣ ಠಾಣೆ ಸಿಪಿಆಯ್ , ನಗರ ಹಾಗೂ ಗ್ರಾಮೀಣ ಠಾಣೆಯ ಪಿಎಸ್ಆಯ್ ಗಳ ಸಹಕಾರದೋದಿಗೆ ಜಿಲ್ಲೆಯ ನಾನಾ ಭಾಗಗಳಿಂದ ಭಂದೊಬಸ್ತಗಾಗಿ ಪೋಲಿಸರು ಆಗಮಿಸಿದ್ದರು. ಅಗ್ನಿಶಾಮಕ ವಾಹನ , ಪೊಲಿಸ್ ಡಿಆರ್ ತುಕಡಿಯನ್ನು ಮೆರವಣಿಗೆಯ ಸಂಧರ್ಬದಲ್ಲಿ ನಿಯೋಜಿಸಲಾಗಿತ್ತು.
Be the first to comment