ಸೇನಾನಿಗಳಿಗೆ ನೂರು ಸಲಾಮು :: ಮಾಣಿಕ ನೇಳಗಿ ತಾಳಮಡಗಿ

ಸೇನಾನಿಗಳಿಗೆ ನೂರು ಸಲಾಮು

ಶತ್ರುಗಳನು ಬಗ್ಗು ಬಡಿದು
ವಿಜಯದ ಪತಾಕೆ ಹಿಡಿದು
ಗೆಲುವಿನ ಮಾಲೆ ಧರಿಸಿದ
ಯೋಧರಿಗೆ ನೂರು ಸಲಾಮು

ಮಡದಿ ಮಕ್ಕಳು  ತೊರೆದು
ದೇಶಕ್ಕಾಗಿ ಹಗಲಿರುಳು ದುಡಿದು
ವೀರಾವೇಶದಿ ಹೋರಾಡುವ
ಯೋಧರಿಗೆ ನೂರು  ಸಲಾಮು

ಹಿಮದ ರಾಶಿಯೇ  ಹೊದಿಕೆ
ನೀಗಿಸಿ ಶೀತ ಜಲದಿ ಬಾಯಾರಿಕೆ
ರಾಷ್ಟಕ್ಕಾಗಿ  ನೋವು ಸಹಿಸುತಿಹ
ಜವಾನರಿಗೆ ಸಲಾಮು ಸಲಾಮು

ತಾಯಿನಾಡಿಗಾಗಿಯೇ ಮಡಿದ
ಜನನಿ ಜನ್ಮಭೂಮಿ ಎಂದು ತಿಳಿದ
ಭಾರತಾಂಬೆಯ ಕಾವಲುಗಾರರಿಗೆ
ಹೆಮ್ಮೆಯ ಅಭಿಮಾನದ ಸಲಾಮು

Be the first to comment

Leave a Reply

Your email address will not be published.


*