ರಾಜ್ಯ ಸುದ್ದಿಗಳು
ಭಟ್ಕಳ
ಕಳೆದ ಮೇ.24ರಂದು ತಾಲೂಕಿನ ಮುಟ್ಟಳಿಯ ತಲಾಂದ ಗುಡ್ಡದ ಮೇಲೆ ಅನುಮಾನಾಸ್ಪದವಾಗಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ದೊರೆತ ಅಪರಿಚಿತ ಮಹಿಳೆಯ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವೀಯಾಗಿದ್ದು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಆರೋಪಿಗಳನ್ನು ಸಾಗರದ ಕಟ್ಟಿನಕಾರ ನಿವಾಸಿ ನಾಗಪ್ಪ ತಂದೆ ನಾರಾಯಣ ನಾಯ್ಕ ಹಾಗೂ ಭಟ್ಕಳದ ತಲಾಂದ ನಿವಾಸಿ ಮಾಸ್ತಪ್ಪ ತಂದೆ ಮಂಜಪ್ಪ ನಾಯ್ಕ ಎಂದು ಗುರುತಿಸಲಾಗಿದೆ.ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಭಟ್ಕಳ್ ಗ್ರಾಮೀಣ ಠಾಣೆ ಸಿ.ಪಿ.ಐ ಮಹಾಬಲೇಶ್ವರ ನಾಯ್ಕ ನೇತೃತ್ವದ ಪೊಲೀಸ್ ತಂಡ ಅರೋಪಿಗಳನ್ನು ಪತ್ತೆ ಬಂಧಿಸುವಲ್ಲಿ ಯಶಸ್ವಿ ಆಗಿದ್ದು,ಮಹಿಳೆಯ ಗುರುತು ಪರಿಚಯ ಮಾತ್ರ ಪತ್ತೆಯಾಗಿಲ್ಲ ಎನ್ನಲಾಗಿದೆ.
ಘಟನೆ ವಿವರ : ಮೇ.21ರಂದು ರಾತ್ರಿ 7.30ರ ಸುಮಾರಿಗೆ ಮಾಸ್ತಪ್ಪ ಮಂಜಪ್ಪ ನಾಯ್ಕ ಇವರ ಮನೆಗೆ ಆತನ ಅಣ್ಣನ ಮಗ ನಾಗಪ್ಪ ನಾರಾಯಣ ನಾಯ್ಕ ಬಾಡಿಗೆ ರಿಕ್ಷಾ ಒಂದರಲ್ಲಿ ಓರ್ವ ಮಹಿಳೆಯನ್ನು ಕರೆದುಕೊಂಡು ಬಂದಿದ್ದು ಯವುದೋ ಉದ್ದೇಶಕ್ಕೆ ರಾತ್ರಿ ಆಕೆಯನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇಬ್ಬರೂ ಸೇರಿ ಬೆಳಗಾಗುವುದರೊಳಗಾಗಿ ಮಹಿಳೆಯ ಶವವನ್ನು ಹತ್ತಿರದ ಮಣ್ಣಿನ ಗುಡ್ಡದ ಮೇಲೆ ಎಸೆದಿದ್ದಾರೆತಲಾಂದ ಗ್ರಾಮದ ಕೊಲ್ಲಿಮುಲ್ಲೆ ನಿವಾಸಿ ಗಣಪತಿ ರಾಮಚಂದ್ರ ನಾಯ್ಕ ಎನ್ನುವವರು ಮೇ.24ರಂದು ಬೆಳಿಗ್ಗೆ ಆ ಭಾಗದಲ್ಲಿ ಹೋಗುತ್ತಿದ್ದಾಗ ವಾಸನೆ ಬರುತ್ತಿರುವುದರಿಂದ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಕಂಡ ಅವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರುದೂರನ್ನು ಆಧರಿಸಿ ತನಿಖೆಗೆ ಇಳಿದ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಇಬ್ಬರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ಎಸ್.ಎನ್., ಪಿ.ಎಸ್.ಐ. ಭರತಕುಮಾರ್ ವಿ., ರತ್ನಾ ಎಸ್.ಕೆ., ಸಿಬ್ಬಂದಿಗಳಾದ ವಿನಾಯಕ ಪಾಟೀಲ, ಮಂಜುನಾಥ ಗೊಂಡ, ದೀಪಕ್ ಎಸ್. ನಾಯ್ಕ, ಮಹೇಶ ಪಟಗಾರ, ರಾಜು ಗೌಡ, ವಿನಾಯಕ ನಾಯ್ಕ, ರೇಣುಕಾ ಹೊನ್ನಿಕೋಳ, ಪ್ರೊಬೆಷನರಿ ಸಬ್ ಇನ್ಸಪೆಕ್ಟರ್ ಸುನಿಲ್ ಬಿ.ವೈ., ಮಂಜುನಾಥ ಪಾಟೀಲ್ ಭಾಗವಹಿಸಿದ್ದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ತನಿಖೆಗೆ ಮಾರ್ಗದರ್ಶನ ನೀಡಿದ್ದರು.
Be the first to comment