ಅಪರಿಚಿತ ಶವದ ಪತ್ತೆ ಹಟ್ಟಿ ಪೊಲೀಸ್ ಠಾಣೆ ಪ್ರಕರಣ ದಾಖಲು.

ವರದಿ ಅಂಭಿಗ್ ನ್ಯೂಸ್

ಜಿಲ್ಲಾ ಸುದ್ದಿಗಳು 

 

ಲಿಂಗಸುಗೂರ

CHETAN KENDULI

ಲಿಂಗಸುಗೂರ ತಾಲ್ಲೂಕಿನ ದಿನಾಂಕ 05.02.2022 ರಂದು ಸಂಜೆ 05:15 ಗಂಟೆ ಸುಮಾರಿಗೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 04.02.2022 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ 05.02.2022 ರಂದು ಬೆಳಗಿನ ಜಾವ 5.00 ಗಂಟೆಯ ನಡುವಿನ ಅವಧಿಯಲ್ಲಿ, ಅಮರೇಶ್ವರ ಕ್ರಾಸ್-ಕೋಠಾ ರಸ್ತೆಯ ಗುರಗುಂಟಾ ಸೀಮಾದ ಪಿರ್ಯಾದಿದಾರ ಹೊಲ ಸರ್ವೆ ನಂ 503 ರಲ್ಲಿ ಅಂದಾಜು 30-35 ವರ್ಷದ ಗಂಡಸು ವ್ಯಕ್ತಿಯನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೇ ದುರುದ್ದೇಶದಿಂದ ಕುತ್ತಿಗೆಗೆ ಹಗ್ಗ ಹಾಕಿ ಕೊಲೆ ಮಾಡಿ ಶವವನ್ನು ಪಿರ್ಯಾದಿಯ ಹೊಲದಲಿ, ತಂದು ಹಾಕಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಡಿಸೇಲ್ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದು ಶವದ ತಲೆಯಿಂದ ಹಿಮ್ಮಡಿಯವರೆಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು. ಶವದ ಕಣ್ಣುಗಳರಡೂ ಮುಚ್ಚಿದ್ದು ಬಾಯಿಯಿಂದ ನಾಲಿಗೆ ಹೊರಗೆ ಚಾಚಿ ಕಪ್ಪಾಗಿದ್ದು, ಕುತ್ತಿಗೆಯಲ್ಲಿ ಸುಟ್ಟ ಹಗೆ ಕಂಡು ಬಂದಿದ್ದು ಎರಡು ಕೈ ಮತ್ತು ಕಾಲುಗಳು ಸಹ ಸುಟ್ಟು ಬೆಂಡಾಗಿ ಕರಕಲಾಗಿದ್ದು, ಹಿಮ್ಮಡಿಯಿಂದ ಬೆರಳುಗಳು ಸುಟ್ಟಿರುವುದಿಲ್ಲಾ ಹಾಗೂ ಶವದ ಪಕ್ಕ ನೀರಿನ ಬಾಟಲ್ ಇದ್ದು, ಅದರಲಿ, ಡಿಸೇಲ್ ಇದ್ದಂತೆ ಕಂಡುಬಂದಿದ್ದು ಹಾಗೂ ಶವದ ಎಡ ಭುಜದ ಪಕ್ಕದಲ್ಲಿ, ಕಪ್ಪು ಬಣ್ಣದ ಸುಟ್ಟ, ಪ್ಲಾಸ್ಟಿಕ್ ಹಗ್ಗದ ಗುರುತು ಬಿದ್ದಿದ್ದು ಇರುತ್ತದೆ ಅಂತಾ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಹಟ್ಟಿ, ಪೊಲೀಸ್ ಠಾಣೆ 22/2022 ಕಲಂ 302, 201 ಐ.ಪಿ.ಸಿ. ಸೆಕ್ಷನ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳ ಲಾಗುವುದುಆದ್ದರಿಂದ .ಮಾನ್ಸೂರ.ವರು ಮೃತನ ಮಾಹಿತಿ ಬಗ್ಗೆ ಎಲ್ಲಾ ದಿನ ಪತ್ರಿಕೆಗಳಲ್ಲಿ ಮತ್ತು ಸುದ್ದಿ ಮಾಧ್ಯಮದಲ್ಲಿ ಪ್ರಸಾರ ಮಾಡಿ ಮೃತನ ಸಂಬಂಧಿಕರಿಗೆ ಮಾಹಿತಿ ತಲುಪುವಂತೆ ಮಾಡಿ ಪ್ರಕರಣ ಪತ್ತೆ ಮಾಡಲು ಸಹಕರಿಸಬೇಕೆಂದ್ದಿದ್ದಾರೆ .

Be the first to comment

Leave a Reply

Your email address will not be published.


*