ಮಸ್ಕಿ: ಶ್ರೀ ಕಾಳಿಕಾ ದೇವಿಯ 8 ನೇಯ ವಾರ್ಷಿಕೋತ್ಸವ ಆಚರಣೆ..!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ಪಟ್ಟಣದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ

ವಿಶ್ವಕರ್ಮ ಸಮಾಜ ಬಾಂಧವರು ಕಾಳಿಕಾ ದೇವಿ ವಾರ್ಷಿಕೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.

ಪ್ರತಿ ವರ್ಷದಂತೆ ವಿಶ್ವಕರ್ಮ ಬಾಂಧವರು ಪಟ್ಟಣದ ಶನಿವಾರ ಕಾಳಿಕಾದೇವಿ ದೇವಸ್ಥಾನದಲ್ಲಿ ಜಮಾವಣೆಗೊಂಡು, ನಂತರ ಶ್ರೀ ಕಾಳಿಕಾ ದೇವಿಯ ಪಲ್ಲಕ್ಕಿಯನ್ನು ಪ್ರಮುಖ ರಸ್ತೆ ಮುಖಾಂತರ ಮೌನೇಶ್ವರ ದೇವಸ್ಥಾನಕ್ಕೆ ತಲುಪಿ ಪೂಜಾ ವಿಧಿ-ವಿಧಾನಗಳನ್ನು ಮುಗಿಸಿಕೊಂಡು ಅಲ್ಲಿಂದ ಪಲ್ಲಕ್ಕಿ ಉತ್ಸವ ಮತ್ತು ಪುರವಂತರ ಸೇವಾ ಮುಖಾಂತರ ಹಾಗೂ 11 ಮಂದಿ ಮಹಿಳೆಯರು ಕುಂಬೋತ್ಸವ ಮುಖಾಂತರ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮುಖಾಂತರ ಶ್ರೀ ಕಾಳಿಕಾದೇವಿಯ ದೇವಸ್ಥಾನಕ್ಕೆ ತಲುಪಿದರು.

ನಂತರ ಸಮಾಜದ ಮಹಿಳೆಯರು ಸೇರಿ ಭಕ್ತಿಯಿಂದ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ಕೈಗೊಂಡು, ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಕಾರ್ಯಕ್ರಮವನ್ನು ನೇರವೇರಿಸಿ ಪ್ರಸಾದವನ್ನು ಸ್ವೀಕರಿಸಿ ಭಕ್ತರು ಧನ್ಯತಾ ಭಾವವನ್ನು ಸಲ್ಲಿಸಿದರು.ಕಾಳಿಕಾ ದೇವಿ ವಾರ್ಷಿಕೋತ್ಸವದಂದು ಶನಿವಾರ ಪ್ರಾತಃ ಕಾಲದಲ್ಲಿ ಕುಲದೇವತೆಯಾದ ಕಾಳಿಕಾದೇವಿ ಮೂರ್ತಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಸಮಾಜದ ಮಕ್ಕಳು, ಮಹಿಳೆಯರು,ಹಿರಿಯರು ಸಾರ್ವಜನಿಕರು ವಿಜೃಂಭಣೆಯಿಂದ ಕಾರ್ತಿಕೋತ್ಸವವನ್ನು ಆಚರಿಸಿದರು.

Be the first to comment

Leave a Reply

Your email address will not be published.


*