ಜಿಲ್ಲಾ ಸುದ್ದಿಗಳು
ಹೊನ್ನಾವರ
ನಾಗರಾಜ್ ಹೆಗಡೆ ಅಪಗಾಲ ಮತ್ತು ಪ್ರಶಾಂತ್ ಮೂಡಲಮನೆಯವರ ಸಂಪಾದಕತ್ವದಲ್ಲಿ ಮೂಡಿ ಬಂದ ‘ಹೊನ್ನಾವರದ ಕವಿತೆಗಳು’ ಕವನ ಸಂಕಲನ ಬಿಡುಗಡೆಗೊಂಡಿತು.ನಮ್ಮ ರಾಜ್ಯದಲ್ಲಿಯೇ ವಿನೂತನವಾದದ್ದು ಹೊಸಗನ್ನಡ ಕಾವ್ಯದ ಒಂದು ಶತಮಾನದ ಮೂರು ತಲೆಮಾರಿನ ಕಾವ್ಯಗಳನ್ನು ಪ್ರತಿನಿಧಿಸುವ ಈ ಸಂಕಲನಕ್ಕೆ ಐತಿಹಾಸಿಕ ಮಹತ್ತರ ಸ್ಥಾನವಿದೆ ಎಂದು ಬಸಪ್ಪ ನಿಘಟಪೂರ ರಾಜ್ಯಾಧ್ಯಕ್ಷ ಮನು ಬಳೆಗಾರ ಅಭಿಪ್ರಾಯಪಟ್ಟರು.
ಸರ್ಕಾರದ ಅನುದಾನ ನೆಚ್ಚಿಕೊಳ್ಳದೆ ಸಂಪನ್ಮೂಲ ಕ್ರೋಢೀಕರಿಸಿ ಕ್ರಿಯಾತ್ಮಕವಾಗಿ ಹೇಗೆಲ್ಲ ಕಾರ್ಯ ನಿರ್ವಹಿಸಬೇಕು ಎಂಬುದಕ್ಕೆ ಹೊನ್ನಾವರ ತಾಲೂಕು ಉತ್ತಮ ನಿದರ್ಶನವಾಗಿದೆ. ನಮ್ಮ ಅವಧಿಯಲ್ಲಿ ಸಿಧ್ಧಗೊಂಡ ಈ ಚಾರಿತ್ರಿಕ ಹೊತ್ತಿಗೆ ಕಾರ್ಯ ಪರಂಪರೆಯ ಅಭ್ಯಾಸಗಳಿಗೆ ದಿಕ್ಸೂಚಿಯಾಗಬಲ್ಲದು. ಈ ಹೊತ್ತಿಗೆಯಲ್ಲಿ ಪ್ರಕಟವಾಗುತ್ತಿರುವ ಈ ಎಲ್ಲಾ ಕವಿಗಳಿಗೆ ಮತ್ತು ಇದಕ್ಕೆ ಮಾರ್ಗದರ್ಶನ ನೀಡಿದ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರು ವಿಶೇಷ ಅಭಿನಂದನೆಗೆ ಅರ್ಹರು ಎಂದರು. ಸಂಪಾದಕ ಮಂಡಳಿಯ ಪರವಾಗಿ ಸಂಧ್ಯಾ ಹೆಗಡೆ ದೊಡ್ಡಹೊಂಡ ಮತ್ತು ರವಿಕುಮಾರ್ ಉಪಸ್ತಿತರಿದ್ದರು.
Be the first to comment