ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆಯ ಪದಾಧಿಕಾರಿಗಳ ನೇಮಕ ಕಾರ್ಯಕಾರಣಿ ಸಭೆ

ವರದಿ: ಗುರುಮೂರ್ತಿ ಬೂದಿಗೆರೆ

ಜಿಲ್ಲಾ ಸುದ್ದಿಗಳು

ದೇವನಹಳ್ಳಿ:

CHETAN KENDULI

ಸಮಾಜದಲ್ಲಿ ಹುಟ್ಟಿರುವ ನಾವು ಇಲ್ಲಿಂದ ಏನನ್ನು ಗಳಿಸಿದ್ದೇವೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಡುಗೆ ಕೊಟ್ಟಿದ್ದೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಶಿಕ್ಷಣಕ್ಕೆ ಆಧ್ಯತೆ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.

ಪಟ್ಟಣದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದೇವನಹಳ್ಳಿ ಇವರ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ,ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಹಾಗೂ ನಿಕಟ ಪೂರ್ವ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮರಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವುದರಿಂದ ಆಮ್ಲಜನಕ ಸಿಗುವಂತೆ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪಾತ್ರ ಮಹತ್ತರವಾಗಿದೆ. ಸರ್ಕಾರವೇ ಎಲ್ಲವನ್ನೂ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ. ಜನರ ಸಹಕಾರವಿದ್ದಾಗ ಸಮಾಜದಲ್ಲಿ ಪರಿವರ್ತನೆ ತರಲಿಕ್ಕೆ ಸಾಧ್ಯವಾಗುತ್ತದೆ. ಎಲ್ಲಾ ಕಡೆಯಲ್ಲಿ ಪರಿಸರ ರಕ್ಷಣೆ ಮಾಡುವ ಬದಲಿಗೆ ನಾಗರಿಕತೆಯ ಹೆಸರಿನಲ್ಲಿ ಕಾಡು ನಾಶ ಮಾಡಿ, ಕಾಂಕ್ರೀಟ್ ಮಾಡಿರುವುದರಿಂದ ಭವಿಷ್ಯದಲ್ಲಿ ಪ್ರಾಕೃತಿಕವಾಗಿ ಸ್ಫೋಟವಾಗಲಿದೆ ಎಂದರು.

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಗಂಗಪ್ಪಗೌಡ ಮಾತನಾಡಿ, ಸರ್ವರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಮಕ್ಕಳು ಶಾಲೆಗೆ ಸೇರುವಾಗ ದೇವರಂತೆ ಇರುತ್ತಾರೆ. 10 ವರ್ಷಗಳ ನಂತರ ಅವರ ಹಾವಬಾವ, ಚಟುವಟಿಕೆಗಳು,ಅವರ ಮನಸ್ಥಿತಿ ಪೂರ್ಣವಾಗಿ ಬದಲಾಗಿರುತ್ತದೆ. ಮಕ್ಕಳಿದ್ದಾಗ ಏನನ್ನು ಕಲಿಯುತ್ತಾರೋ ಅದು ಅವರ ಜೀವನದಲ್ಲಿ ಉಳಿಯುತ್ತದೆ. ಆದರೆ, ವಿದ್ಯಾವಂತರಾದ ಯುವಕರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದಕ್ಕೆ ಕಾರಣವೇನು? ಹಾಗಾದರೆ ಶಾಲೆಗಳಲ್ಲಿ ಸಿಗುತ್ತಿರುವ ಶಿಕ್ಷಣದಲ್ಲಿ ಲೋಪವಿದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಯುವಜನರಿಗೆ ಮಾರ್ಗದರ್ಶನದ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಈ ಮಾರ್ಗದರ್ಶನವನ್ನು ನಮ್ಮ ಸಂಸ್ಥೆ ನೀಡುತ್ತಿದೆ. ಅನ್ಯಾಯಕ್ಕೆ ತಲೆಬಾಗದಂತಹ, ಸಂತೃಪ್ತಿಯ ಬದುಕಿಗೆ ಒಗ್ಗಿಕೊಳ್ಳುವಂತಹ ಆದರ್ಶವನ್ನು ಅವರಿಗೆ ಕಲಿಸಬೇಕಾಗಿದೆ. ಮಕ್ಕಳಿಂದ ಯೌವನಸ್ಥರವರೆಗೂ ಅವರ ಕಲಿಕೆ ಸರಿಯಾಗಿ ಇಲ್ಲದೆ ಇದ್ದಾಗ ಪ್ರತಿ ಹಂತದಲ್ಲೂ ಶಿಕ್ಷಕ ವರ್ಗದವರು ಕೈ ಚೆಲ್ಲುತ್ತಿದ್ದಾರೆ. ಇದು ಇಂದಿನ ಶಿಕ್ಷಣ ನೀತಿಗಳ ಫಲವಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಯುಕ್ತ ನಾಗರಾಜ್ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು. ಕೇವಲ ಅಂಕ ಗಳಿಕೆಯ ವಿಷಯ ಜ್ಞಾನ ನೀಡಿದರೆ ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಜತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ. ಇಂಥ ಶಿಸ್ತಿನ ಶಿಕ್ಷಣ ನೀಡುತ್ತಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ನೂತನ ಪದಾಧಿಕಾರಿಗಳು:

ಅಧ್ಯಕ್ಷ: ಪಿ.ವಿಜಯಕುಮಾರ್, ಗೌರವ ಅಧ್ಯಕ್ಷ ಎಸ್.ಆರ್.ಸತೀಶ್ ಕುಮಾರ್ , ಉಪಾಧ್ಯಕ್ಷರಾಗಿ ಜಿ.ಗಣೇಶ್ ಬಾಬು, ನಾಗೇಂದ್ರ, ಲೋಕೇಶ್, ಎಂ.ಆನಂದ್, ನಾಗರಾಜಯ್ಯ,ಲಕ್ಷ್ಮೀನಾರಾಯಣ(ಲಚ್ಚಿ), ಲಕ್ಷ್ಮೀವಿಜಯಕುಮಾರ್, ಸೋಮಶೇಖರ್, ಕಾರ್ಯದರ್ಶಿ: ಎಂ.ಎಸ್.ಸೀತಾರಾಮ್, ಜಿಲ್ಲಾ ಸಹಾಯಕ ಆಯುಕ್ತರಾಗಿ: ಶಿವಶಂಕರ್, ಪುನೀತಾ, ವೆಂಕಟೇಶ್, ರಾಜೇಶ್ವರಿ, ಶ್ರೀನಿವಾಸ್ ಮೂರ್ತಿ, ಸಾರಿಕಾ, ಶ್ರೀರಾಮಯ್ಯ, ಡಾ.ಕಾವ್ಯ, ಜಂಟಿ ಕಾರ್ಯದರ್ಶಿ: ಎಚ್.ಬಿ.ಲಕ್ಷ್ಮೀದೇವಿ, ಸಂಘಟನಾ ಕಾರ್ಯದರ್ಶಿಗಳಾಗಿ: ಶಂಕರ್ ಕಾಂಬ್ಳೆ, ಕೆ.ಎಸ್.ಗೀತಾ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನಿಕಟ ಪೂರ್ವ ಪದಾಧಿಕಾರಿಗಳು: ಎಸ್.ಎಲ್.ಎಸ್ ಶಾಲೆಯ ಸಂಸ್ಥಾಪಕ ಧನಂಜಯ್, ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ನರಸಾರೆಡ್ಡಿ, ನಿವೃತ್ತ ಶಿಕ್ಷಕ ಶಿವಶಂಕರ್ ಅವರನ್ನು ಸನ್ಮಾನಿಸಿದರು.

Be the first to comment

Leave a Reply

Your email address will not be published.


*