ಜಾತಿ ನಿಂದನೆ ಆಡಿಯೋ ವೈರಲ್, ದಲಿತ ಸಮುದಾಯದವರಿಂದ ಆಕ್ರೋಶ_-_ ಎಂವಿಎಂ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ವಿರುದ್ಧ ಕಿಡಿ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳ

ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ವಿಶ್ವನಾಥಪುರ ಪೊಲೀಸ್ ಠಾಣೆಯ ಆವರಣದಲ್ಲಿ ದಲಿತ ಸಮುದಾಯದ ಮುಖಂಡರು ಹಾಗೂ ಆಲೂದುದುದ್ದನಹಳ್ಳಿ ದಲಿತ ಸಮುದಾಯದವರು ಜಾತಿ ನಿಂದನೆ ಮಾಡಿದ ಎಂವಿಎಂ ಶಾಲೆಯ ಸಂಸ್ಥಾಪಕ ಶ್ರೀನಿವಾಸ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.ನೆನ್ನೆಯಷ್ಟೇ ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಮದಲ್ಲಿರುವ ಎಂವಿಎಂ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಅದೇ ಶಾಲೆಯಲ್ಲಿನ ಸಿಬ್ಬಂದಿಯೊಂದಿಗೆ ಮೊಬೈಲ್ ಸಂಭಾಷಣೆಯಲ್ಲಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಬಾಯಿಗೆ ಬಂದಹಾಗೆ ಮಾತನಾಡುವ ವೇಳೆ ದಲಿತ ಸಮುದಾಯದ ಕೆಲ ಜಾತಿಗಳನ್ನು ಮಧ್ಯದಲ್ಲಿ ಪ್ರಸ್ತಾಪಿಸಿ, ಪರಿಶಿಷ್ಟ ಜಾತಿಯವರು ಕೀಳು ಮಟ್ಟದವರೆಂದು ಅವಹೇಳನ ಮಾಡಿರುವ ಮೊಬೈಲ್ ಸಂಭಾಷಣೆ ಆಡಿಯೋ ವೈರಲ್ ಆಗುತ್ತಿದ್ದಂತೆ, ದಲಿತ ಸಂಘಟನೆಯ ಮುಖಂಡರು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರು.

CHETAN KENDULI

ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ವಿ.ಸ್ವಾಮಿ ಮಾತನಾಡಿ, ಆಲೂರುದುದನಹಳ್ಳಿ ಗ್ರಾಮದಲ್ಲಿರುವ ಎಂವಿಎಂ ಶಾಲೆಯಲ್ಲಿ ಪದೇ ಪದೇ ಸಿಬ್ಬಂದಿ ವಿಚಾರ ಮತ್ತು ವೈಯಕ್ತಿ ವಿಚಾರಗಳನ್ನು ಮಾತನಾಡುತ್ತಾ ಅಲ್ಲಿನ ಸಂಸ್ಥಾಪಕ ಶ್ರೀನಿವಾಸ್ ಸಿಬ್ಬಂದಿಯನ್ನು ಮಾತನಾಡುವಾಗ ಸಮುದಾಯದ ಜಾತಿ ನಿಂದನೆ ಮಾಡಿರುತ್ತಾರೆ. ಅದನ್ನು ಖಂಡಿಸಿ ಕ್ರಮ ಕೈಗೊಳ್ಳುವಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕ ಬಹುಜನ ಹಿತರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಗಣರಾಜ್ಯೋತ್ಸವ ದಿನವೇ, ಸಂವಿಧಾನ ಕೊಟ್ಟಂತಹ ಹಕ್ಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಆದ್ರೆ, ನೆನ್ನೆ ನಡೆದ ವಿದ್ಯಾಮಾನದಲ್ಲಿ ನಮ್ಮ ಜಾತಿ ಸಮುದಾಯದ ಕುರಿತು ಕೀಳುಮಟ್ಟದಲ್ಲಿ ಮಾತನಾಡಿರುತ್ತಾರೆ. ಮತ್ತು ಇಡೀ ಸಮಾಜವನ್ನು ಕೆಣುಕುವಂತಹ ಕೀಳು ಭಾವನೆಯಾಗಿದೆ. ಕೂಡಲೇ ಅವರು ಸಮುದಾಯದ ಮುಂದೆ ಕ್ಷಮೆಯಾಚಿಸಬೇಕು. ಇಲ್ಲವಾದರೆ, ತಾಲೂಕಿನ ಎಲ್ಲಾ ಸಂಘಟನೆಗಳು ಸೇರಿ ಅವರ ವಿರುದ್ಧ ಸಿಡಿದೇಳುತ್ತೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಎಂವಿಎಂ ಶಿಕ್ಷಣ ಸಂಸ್ಥೆಯ ಅನುಮತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆಯಲ್ಲಿ ಆಲೂರುದುದ್ದನಹಳ್ಳಿ ಗ್ರಾಮದ ದಲಿತ ಸಮುದಾಯದವರು, ಕುಂದಾಣ ಸೇರಿದಂತೆ ದೇವನಹಳ್ಳಿ ತಾಲೂಕಿನ ದಲಿತ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*