ಸಂವಿಧಾನದಡಿಯಲ್ಲಿ ಎಲ್ಲರೂ ಒಂದೇ ಎಂದು ಸಾರಿದ ದಿನ ‘ಗಣರಾಜ್ಯೋತ್ಸವ’

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಸಂವಿಧಾನದಡಿಯಲ್ಲಿ ಎಲ್ಲರೂ ಒಂದೇ ಎಂದು ಸಾರುವ ದಿನವೆಂದರೆ ಅದು ಗಣರಾಜ್ಯೋತ್ಸವ ದಿನವಾಗಿದೆ. ಪ್ರತಿ ವರ್ಷ ಜ.೨೬ರಂದು ದೇಶದಾದ್ಯಂತ ಆಚರಿಸುತ್ತಾರೆ ಎಂದು ಕೊಯಿರ ಗ್ರಾಪಂ ಅಧ್ಯಕ್ಷ ರಮ್ಯಶ್ರೀನಿವಾಸ್(ಎಚ್‌ವಿಎಸ್) ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಪಂಯಲ್ಲಿ ೭೩ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ೧೯೫೦ ಜನವರಿ ೨೬ ರಂದು ಸಂವಿಧಾನ ಜಾರಿಯಾಗಿದೆ. ಆ ಜಾರಿಯಾದ ದಿನವನ್ನು ಅತ್ಯಂತ ವಿಜೃಭಣೆಯಿಂದ ಭಾರತೀಯರಾದ ನಾವುಗಳು ಆಚರಿಸಿಕೊಂಡು ಬರುತ್ತಿದ್ದೇವೆ. ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿಜೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಅವರಿಗೆ ಪುಷ್ಪನಮನ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಲಾಗಿದೆ. ಇಡೀ ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಹರಡಿರುವುದರಿಂದ ಅತ್ಯಂತ ಸರಳ ಮತ್ತು ಅರ್ಥಪೂರ್ಣವಾಗಿ ಸರಕಾರದ ಆದೇಶದಂತೆ ಆಚರಿಸಲಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಮಮತಾಶಿವಾಜಿ, ಅರುವನಹಳ್ಳಿ ಬಿಂದು, ಆಂಜಿನಮ್ಮ, ಎಸ್.ಸಿ.ಆನಂದ್, ಮುನಿಆಂಜಿನಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮಮ್ಮ, ಸಿಬ್ಬಂದಿಗಳಾದ ಭೈರೇಗೌಡ, ಮುನೇಗೌಡ, ಮುನಿರಾಜು, ಮೋಹನ್, ಹನುಮಂತೇಗೌಡ, ಹರೀಶ, ತಿಮ್ಮಪ್ಪ, ಅಂಬರೀಶ್, ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*