ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡು ಬಡವ ನಿರಾಶ್ರಿತರಾಗಿ 73 ನೇ ಸಂವಿಧಾನ ದಿನಾಚರಣೆ ಅಂಗವಾಗಿ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ಬಹುಜನ ಸಮಾಜ ಪಾರ್ಟಿಯ ವತಿಯಿಂದ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಸುತ್ತಮುತ್ತಲಿನ ಗ್ರಾಮದ ಕಡುಬಡವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮದ ಆಯೋಜಕರಾದ ಮಲ್ಲೇಶ್ ಹಾಗೂ ತಂಡ ದಾನಿಗಳಾದ ಬಹುಜನ ಸಮಾಜ ಪಾರ್ಟಿಯ ರಾಜ್ಯ ನಾಯಕರಾದ ಪುರುಷೋತ್ತಮ್ ಮತ್ತು ತಂಡ ಉಪಸ್ಥಿತರಿದ್ದರು
ಇಂದು ನಾವು 73 ನೇ ಸಂವಿಧಾನ ದಿನಾಚರಣೆ ಯನ್ನು ಆಚರಿಸುತ್ತಿದ್ದು ಬಾಬಾಸಾಹೇಬರ ಕನಸು ಕನಸಾಗೇ ಉಳಿದಿದೆ ಕಳೆದ 73 ವರ್ಷಗಳಿಂದ ಭಾರತ ದೇಶದಲ್ಲಿ ಬಡತನವನ್ನು ಹೊಡೆದೋಡಿಸುವ ಕೆಲಸ ನಡೆದಿಲ್ಲ ನಾಮಮಾತ್ರಕ್ಕೆ ಬಡವರಪರ ಎಂದು ಹೇಳುವ ರಾಜಕೀಯ ನಾಯಕರು ಮಾತ್ರ ನಮ್ಮಲ್ಲಿ ಸೃಷ್ಟಿಯಾಗಿದ್ದಾರೆ ಇನ್ನಾದರೂ ಯುವಜನತೆ ಎಚ್ಚೆತ್ತುಕೊಳ್ಳಲಿ ಸರಿಯಾದ ನಾಯಕರನ್ನು ಆಯ್ಕೆ ಮಾಡುವಂತಾಗಲಿ ನಿಜವಾದ ಸತ್ಯಾಂಶ ವಿರುವ ಬಹುಜನ ಸಮಾಜ ಪಾರ್ಟಿ ಯನ್ನು ಅಧಿಕಾರಕ್ಕೆ ತರುವ ಕೆಲಸ ಪ್ರಾರಂಭವಾಗಲಿ ಎಂದು ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿ ಎಸ್ ಪಿ ನಾಯಕರಾದ ಪುರುಷೋತ್ತಮ ಅಭಿಪ್ರಾಯಪಟ್ಟರು
ಕಾರ್ಯಕ್ರಮವನ್ನು ಆಯೋಜಿಸಿದ್ದ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಮಲ್ಲೇಶ್ ಕಾರ್ಯಕ್ರಮಕ್ಕೆ ತಮ್ಮ ಸ್ವಯಿಚ್ಛೆಯಿಂದ ದಾನಿಗಳಾಗಿ ಮುಂದೆ ಬಂದಿರುವಂತಹ ರಾಜ್ಯ ಬಿ ಎಸ್ ಪಿ ನಾಯಕರಾದ ಪುರುಷೋತ್ತಮ್ ರವರಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳು ಪುರುಷೋತ್ತಮ್ ರವರ ನೇತೃತ್ವದಲ್ಲಿ ಸಾಗಲಿ ಎಂದು ಅಭಿಪ್ರಾಯಪಟ್ಟರುಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಬಿಎಸ್ಪಿ ತಾಲ್ಲೂಕು ಉಸ್ತುವಾರಿಗಳಾದ ಕೆ ವಿ ಮುನಿಯಪ್ಪ ತಾಲೂಕು ಉಪಾಧ್ಯಕ್ಷರಾದ ಪೂಜಪ್ಪ ತಾಲೂಕು ಸಂಘಟನಾ ಕಾರ್ಯದರ್ಶಿ ಸುರೇಶ್ ಸಾಸಲು ಹೋಬಳಿ ಅಧ್ಯಕ್ಷರಾದ ನರಸಿಂಹರಾಜು , ಲೋಹಿತ್,ಸ್ಥಳೀಯ ಮುಖಂಡರಾದ ಶಿವಕುಮಾರ್ ಜಗನ್ನಾಥ್ ಹಾಗೂ ತಂಡ ನಗರ ಅಧ್ಯಕ್ಷರಾದ ಶೋಯಬ್ ಖಾನ್ ಅನ್ನದಾಸೋಹ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು
Be the first to comment