ರಾಜ್ಯ ಸುದ್ದಿಗಳು
ಮಸ್ಕಿ
ತಾಲೂಕಿನ ಗ್ರಾಪಂ ವ್ಯಾಪ್ತಿಯ ಎಸ್ಸಿ, ಎಸ್ಟಿ, ವಿದ್ಯಾರ್ಥಿಗಳಿಗೆ ಗ್ರಾಪಂ ನಿಧಿಯ ೨೫% ಅನುದಾನದಲ್ಲಿ ಪಠ್ಯ ಪುಸ್ತಕ ವಿತರಿಸಲು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ತಾಲೂಕು ಸಮಿತಿ ವತಿಯಿಂದ ಕಾಲೇಜುಗಳು ಪ್ರಾರಂಭಗೊಂಡು ೬ ತಿಂಗಳು ಕಳೆದರೂ ತಾಲೂಕಿನ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಗ್ರಾಪಂ ನಿಧಿಯ ೨೫% ಅನುದಾನದಲ್ಲಿ ಪಠ್ಯ ಪುಸ್ತಕ ವಿತರಿಸಿಲ್ಲ. ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಣ ವಿರೋಧಿ ನೀತಿಯಾಗಿದೆ. ಈ ಧೋರಣೆಯನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ.
ಆದ್ದರಿಂದ ಈ ಕೂಡಲೇ ಪುಸ್ತಕ ವಿತರಣೆಗೆ ಅರ್ಜಿ ಕರೆದು, ಪಿಯುಸಿ ವಿದ್ಯಾರ್ಥಿಗಳಿಗೆ ೨೦೦೦, ಪದವಿ ವಿದ್ಯಾರ್ಥಿಗಳಿಗೆ ೩೦೦೦ ರೂಪಾಯಿ, ವೃತ್ತಿಪರ ಹಾಗೂ ಉನ್ನತ ಶಿಕ್ಷಣಕ್ಕೆ ೪೦೦೦ ರೂಪಾಯಿಗಳನ್ನು ನೀಡಬೇಕೆಂಬುದು ವಾಡಿಕೆಯೆಂತೆ ಗ್ರಾಪಂ ಗೆ ಸಾಕಷ್ಟು ಅನುದಾನ ಹರಿದು ಬರುತ್ತದೆ. ಆ ಅನುದಾನದ ೨೫% ಅನುದಾನವನ್ನು ಎಸ್ಸಿ, ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಸರ್ಕಾರ ಆದೇಶ ನೀಡಿದ್ದರೂ ಅದನ್ನು ಪಾಲಿಸುವಲ್ಲಿ ಪಂಚಾಯತ್ ಆಡಳಿತಗಳು ಹಿಂದೇಟು ಹಾಕುತ್ತಿರುವುದು ಎಸ್ಸಿ, ಎಸ್ಟಿ ವಿರೋಧಿ ನೀತಿಯಾಗಿದೆ. ಅಲ್ಲದೇ ಸರಿಯಾದ ಸಮಯಕ್ಕೆ ವಾರ್ಡ್ ಸಭೆ, ಗ್ರಾಮ ಸಭೆ, ಕೆಡಿಪಿ ಸಭೆಗಳನ್ನು ನಡೆಸದೇ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಕ್ರಿಯಾ ಯೋಜನೆ ಮಾಡಿ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಲಾಗುತ್ತಿದೆ. ಇದನ್ನು ಈ ಕೂಡಲೇ ನಿಲ್ಲಿಸಿ ಪಾರದರ್ಶಕ ಆಡಳಿತಕ್ಕೆ ಮುಂದಾಗಬೇಕು. ಅಲ್ಲದೇ ಈ ಕೂಡಲೇ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕ ಒದಗಿಸಲು ಮುಂದಾಗಬೇಕು ಎಂದು ತಾಲೂಕ ಪಂಚಾಯತ ಅಧಿಕಾರಿಗೆ ಮನವಿ ಮಾಡಿದರು. ಒಂದು ವೇಳೆ ನಿರ್ಲಕ್ಷ್ಯ ಧೋರಣೆ ತೋರಿದರೆ ತಾಪಂ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಎಸ್‌ಎಫ್‌ಐ ಸಂಘಟನೆಯೂ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕು ಮುಖಂಡರಾದ ಬಸವಂತ ಹಿರೇಕಡಬೂರು, ಶರಣಬಸವ ಕೆ. ಅನಿಲ್ ಕುಮಾರ್, ವಿರೇಶ್ ಬಲದಂಡಿ, ಕೆಪಿ ಆರ್ ಎಸ್ ಮುಖಂಡ ಹನುಮಂತ ಬಲದಂಡಿ, ಕರಿಯಪ್ಪ, ನಾಗರಾಜ್, ಸೋಮಣ್ಣ, ಅಮರೇಶ್, ದ್ಯಾವಣ್ಣ, ನಿರುಪಾದಿ ಸೇರಿದಂತೆ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment