ಜಿಲ್ಲಾ ಸುದ್ದಿಗಳು
ಕುಂದಾಪುರ
ಉಪ್ಪಿನಂಗಡಿಯಲ್ಲಿ ಪೊಲೀಸರು ಅಮಾಯಕರನ್ನು ಬಂಧಿಸಿದ್ದಲ್ಲದೇ, ಬಂಧಿತರ ಬಿಡುಗಡೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬರ್ಬರವಾಗಿ ಲಾಠಿಚಾರ್ಜ್ ನಡೆಸಿದ ಪೊಲೀಸರ ಈ ಕ್ರೌರ್ಯವನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ವತಿಯಿಂದ ಡಿ. 15 ರಂದು ಬುಧವಾರ ಸಂಜೆ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಪ್ರತಿಭಟನೆಗಾರರನ್ನು ಉದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ತಾಲೂಕಿನ ಕಾರ್ಯದರ್ಶಿ ಲಿಯಾಕತ್ ಕಂಡ್ಲೂರು ಮಾತನಾಡಿ ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಪ್ರತಿಭಟಿಸುವ ಹಕ್ಕು ಇಲ್ಲವೇ, ಉಪ್ಪಿನಂಗಡಿ ಪೊಲೀಸರು ರಾತೋರಾತ್ರಿ ಅಮಾಯಕರನ್ನು ಬಂಧಿಸಿದ್ದಲ್ಲದೇ, ಬಂಧಿತರ ಬಿಡುಗಡೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬರ್ಬರವಾಗಿ ಲಾಠಿಚಾರ್ಜ್ ನಡೆಸಿದ್ದಾರೆ. ಬಂದಿತರಾದ ಪಿಎಫ್ಐ ಕಾರ್ಯಕರ್ತರು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಬಾಗಿಯಾದವರು ಅಲ್ಲ, ಅವರು ಅಮಾಯಕರು. ಅಂತವರನ್ನು ಬಂದಿಸಿದ್ದು ಖಂಡನಿಯ ಎಂದು ಹೇಳಿದರು.
ನೀವು ಸಂವಿಧಾನ ಬಧ್ದ ಪೋಲಿಸರೇ..
ಮಂಗಳೂರುನಲ್ಲಿ ತ್ರಿಶೂಲ ವಿತರಣೆ ಮಾಡಿದವರ ಮೇಲೆ ಲಾಠಿಯೂ ಇಲ್ಲ , ಕೇಸು ಇಲ್ಲ, ಜಿಲ್ಲಾಧಿಕಾರಿಯ ಕಾಲರ್ ಪಟ್ಟಿ ಹಿಡಿಯುತ್ತೇವೆ ಎಂದು ಬೆದರಿಕೆ ಹಾಕಿದವರ ಬಂಧನ ಇಲ್ಲ , ಪೊಲೀಸ್ ಅಧಿಕಾರಿ ಒಬ್ನರನ್ನು ಕಾಲು ಮುರಿಯುತ್ತೇವೆ ಎಂದು ಹೇಳಿದವನ ಮೇಲೆ ಕೇಸು ಇಲ್ಲ , ಆದರೆ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದವರ ಮೇಲೆ ಹಿಂಸೆ , ಲಾಠಿ ಏಟು ಇದು ನ್ಯಾಯವೇ ಎಂದು ಗುಡುಗಿದರು.ದ.ಕ ಜಿಲ್ಲೆಯಲ್ಲಿ ಅದೆಷ್ಟೋ ಮುಸ್ಲಿಮರ ಮೇಲೆ ಹಿಂಸೆ ದೌರ್ಜನ್ಯ ನಡೆದಿದೆ ಎಷ್ಟು ಜನ ಸಂಘಿಗಳ ಮೇಲೆ ಕೇಸು ಹಾಕಿದ್ದೀರಿ, ಎಷ್ಟು ಜನರ ಬಂಧನ ಆಗಿದೆ ಎಂದು ಪ್ರಶ್ನೆಸಿದರು.
ಎಲ್ಲರಿಗೂ ಸಮಾನ ನ್ಯಾಯ ಮತ್ತು ಸಂವಿಧಾನಾತ್ಮಕವಾಗಿ ಕೆಲಸ ಮಾಡುವುದು ಪೊಲೀಸರ ಕರ್ತವ್ಯ. ಅದು ಬಿಟ್ಟು ಒಂದೇ ಸಮುದಾಯವನ್ನು ಗುರಿಪಡಿಸುವುದು ಎಷ್ಟು ಸರಿ..?
ಇಂದು ನಮ್ಮ ಬೇಡಿಕೆ ಅಕ್ರಮವಾಗಿ ಬಂಧಿಸಿದ ನಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಮತ್ತು ಲಾಠಿಚಾರ್ಜ್ ಗೆ ಅನುಮತಿ ಕೊಟ್ಟ ಅಧಿಕಾರಿಯನ್ನು ವಜಾ ಗೊಳಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಎಫ್ ಐ ಮುಖಂಡರಾದ ಖಲೀಲ್ ಗಂಗೊಳ್ಳಿ, ಸಹುದ್ ಶಿರೂರು, ರಫೀಕ್ ಕಂಡ್ಲೂರು ಹಾಗೂ ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿದ್ದರು.
Be the first to comment