ಜಿಲ್ಲಾ ಸುದ್ದಿಗಳು
ಮಸ್ಕಿ
ಪುರಸಭೆ ಚುನಾವಣೆಗೆ ನಾಮ ಪತ್ರಸಲ್ಲಿಕೆ ಜೋರಾಗಿದೆ. ಚುನಾವಣೆ ಆಖಾಡದಲ್ಲಿ ಕೆಆರ್‌ಎಸ್ ಪಕ್ಷ ಎಂಟ್ರಿ ಕೊಟ್ಟಿದ್ದರಿಂದ ಪುರಸಭೆ ಚುನಾವಣೆ ಕಣ ರಂಗೇರಿದೆ. ಕೆ ಆರ್ ಎಸ್ ಪಕ್ಷವು ಮಸ್ಕಿಯ ಮುಖಂಡರು, ಕಾರ್ಯಕರ್ತರ ಪಡೆ ಕಟ್ಟಿಕೊಂಡು, ಅಭ್ಯರ್ಥಿಗಳ ಜತೆ ಪುರಸಭೆ ಕಚೇರಿಗೆ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.ವಿಧಾನಸಭೆ ಉಪಚುನಾವಣೆ ನಂತರ ಕೆ ಆರ್ ಎಸ್ ಪಕ್ಷ ಪುರಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಶೆಡ್ಡು ಹೊಡೆದು ನಿಂತಿದೆ. ಮಸ್ಕಿಯ ಒಟ್ಟು:23 ವಾರ್ಡ್ ಗಳ ಪೈಕಿ 5 ವಾರ್ಡ್ ಗಳಲ್ಲಿ ನಾಮಪತ್ರ ಸಲ್ಲಿಸಲಾಗಿದೆ
1.10 ನೇ ವಾರ್ಡ್ ನಿಂದ
ಗೌಷಿಯ ಬೇಗಂ ಗಂಡ ನಜೀರ್ ಸಾಬ್,
2.12ನೇ ವಾರ್ಡ್ ನಿಂದ ಆಲಂ ಭಾಷಾ ತಂದೆ ಅಹಮದ್ ಸಾಬ್
3.16ನೇ ವಾರ್ಡ್ ನಿಂದ ವೆಂಕಟೇಶ್
4.17ನೇ ವಾರ್ಡ್ ನಿಂದ ತಿಮ್ಮಣ್ಣ ತಂದೆ ಹನುಮಂತಪ್ಪ
5.21ನೇ ವಾರ್ಡ್ ನಿಂದ ಅಮರಮ್ಮ ಸೇರಿ ಐದು
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದೆ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಪಕ್ಷದ ರಾಜ್ಯ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಓಬಳೇಶಪ್ಪ, ಎಸ್ಸಿ
ಎಸ್ಟಿ ಘಟಕದ ಉಪಾಧ್ಯಕ್ಷರಾದ ಆನಂದರವರು ಮತ್ತು ರಾಯಚೂರು ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ನಿರುಪಾದಿ ಗೋಮರ್ಸಿ ಮತ್ತು ಮಾನ್ವಿ ತಾಲೂಕು ಯುವ ಘಟಕದ ಅಧ್ಯಕ್ಷರಾದ ದೇವರಾಜ ದೇವಿಪುರ ಹಾಗೂ ಜಿಲ್ಲಾ ಕಾನೂನು ಸಲಹೆಗಾರ ಸುಬ್ಬರಾವ್ ಕುಲಕರ್ಣಿ ಲಿಂಗಸೂಗೂರು ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ದುರುಗಪ್ಪ ಹಾಗೂ ಮಸ್ಕಿ ಪಟ್ಟಣದ ಪಕ್ಷದ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Be the first to comment