ಜಿಲ್ಲಾ ಸುದ್ದಿಗಳು
ಕಾರವಾರ
ಎರಡು ವರ್ಷ ಕಳೆದರೂ ಬಿಲ್ ಪಾವತಿಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಕಾರವಾರ ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘವು ಮನವಿ ಸಲ್ಲಿಸಿದೆ.ದತ್ತಾಂಶಗಳನ್ನು ಕೆ-1 ತಂತ್ರಾಂಶದಿಂದ ಕೆ-2ಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ತಡವಾಗಿರುವ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಖಜಾನೆ ಕಚೇರಿಯಲ್ಲಿ ಕೆ-2 ತಂತ್ರಾಂಶದಲ್ಲಿರುವ ಯಾವುದೇ ಬಿಲ್ ಪಾವತಿಸದಂತೆ ಸರ್ಕಾರದ ಸೂಚನೆಯಿದೆ. ದತ್ತಾಂಶಗಳನ್ನು ಕೆ-1 ತಂತ್ರಾಂಶದಿಂದ ಕೆ-2ಗೆ ವರ್ಗಾವಣೆ ಮಾಡಲಾಗುತ್ತಿದೆ. ಬಿಲ್ ಮೊತ್ತವನ್ನು ಪಡೆಯಲು ಗುತ್ತಿಗೆದಾರರು ವಿವಿಧ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಕೋವಿಡ್ 19ನಿಂದಾಗಿ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ.
ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮರು ಪಾವತಿಸಲಾಗದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಕೂಡಲೇ ಹಣ ಪಾವತಿ ಮಾಡಬೇಕು’ ಎಂದು ಸಂಘದ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಖಜಾನೆ ಇಲಾಖೆ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Be the first to comment