ಜಿಲ್ಲಾ ಸುದ್ದಿಗಳು
ಮಸ್ಕಿ
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ ಕೇಂದ್ರದ ಮುಂಭಾಗ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರೆಲ್ಲರೂ ಒಟ್ಟಾಗಿ ಸೇರಿ ಗದ್ದೆಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಇವರ ನೇತೃತ್ವದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಗೆಯೇ ನಂತರ ಡಾ. ಮೌನೇಶ ಮಾತನಾಡಿ ಏಡ್ಸ್ ರೋಗವು ದೈಹಿಕ ಸಂಪರ್ಕ ಹೊಂದಿದ ವ್ಯಕ್ತಿಯ ರಕ್ತವನ್ನು ತಪಾಸಣೆ ಮಾಡದ ವ್ಯಕ್ತಿಯೊಂದಿಗೆ ಸಂಭೋಗ ಕ್ರಿಯೆ ನಡೆಸುವುದರಿಂದ ಮತ್ತು ರಕ್ತ ಪಡೆಯುವುದರಿಂದ ಏಡ್ಸ್ ಬಹಳ ಬೇಗನೆ ಹರಡುವ ಒಂದು ರೋಗವಾಗಿದೆ. ಬಹಳ ಎಚ್ಚರಿಕೆವಹಿಸಬೇಕು. ನೆರೆದಿರುವ ಎಲ್ಲಾ ಸಾರ್ವಜನಿಕರಿಗೆ ಏಡ್ಸ್ ಬಗ್ಗೆ ಆಡು ಭಾಷೆಯಲ್ಲಿಯೇ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಡಾ. ಮೌನೇಶ ಪೂಜಾರ್ ವೈದ್ಯಾಧಿಕಾರಿಗಳು ಪಿಹೆಚ್ ಸಿ – ಮಸ್ಕಿ, ಗದ್ದೆಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ,ಹುಸೇನಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ, ಹರೀಶ್ ಎಲ್ ಟಿ ಓ, ಮೌಲಾಲಿ ಕೆ.ಎಸ್. ಎ. ಪಿ. ಎಸ್ ಎನ್.ಜಿ.ಒ ಸದಸ್ಯರು, ನಾಗರಾಜ್ ಹಿರೇ ಕಡಬೂರು ಸಿಬ್ಬಂದಿ, ತಾಲೂಕಿನ ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರೂ ಇದ್ದರು.
Be the first to comment