ರಾಜ್ಯ ಸುದ್ದಿಗಳು
ಬೆಂಗಳೂರು:
ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಒಳಗಾಗಿರುವ ವೈದ್ಯರ ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಮತ್ತೊಬ್ಬ ವೈದ್ಯನಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರ ಮನೆಯನ್ನ ಸೀಲ್ಡೌನ್ ಮಾಡಲಾಗಿದೆ.
ಓಮಿಕ್ರಾನ್ ಸೋಂಕಿತ ವೈದ್ಯನ ಪ್ರಾಥಮಿಕ ಸಂಪರ್ಕಿತನ ಮನೆ ಸೀಲ್ ಡೌನ್ ಮಾಡಲಾಗಿದ್ದು, ಓಮಿಕ್ರಾನ್ ವೈರಸ್ ಪತ್ತೆಯಾಗಿರುವ ವೈದ್ಯರ ಸಂಪರ್ಕಕ್ಕೆ ಮತ್ತೊಬ್ಬ ವೈದ್ಯ ಬಂದಿದ್ದರು. ಪ್ರಾಥಮಿಕ ಸಂಪರ್ಕಿತ ವೈದ್ಯರಿಗೆ ಪಾಸಿಟಿವ್ ಆಗಿದೆ, ಹೀಗಾಗಿ ಕೋರಮಂಗಲದಲ್ಲಿರುವ ಪ್ರಾಥಮಿಕ ಸಂಪರ್ಕಿತ ವೈದ್ಯರ ಮನೆಯನ್ನ ಸೀಲ್ಡೌನ್ ಮಾಡಲಾಗಿದೆ. ಪಾಸಿಟಿವ್ ಆಗಿರುವ ಪ್ರಾಥಮಿಕ ಸಂಪರ್ಕಿತ ವೈದ್ಯರ ಪತ್ನಿ ಕೂಡ ದಂತ ವೈದ್ಯೆಯಾಗಿದ್ದು, ಮನೆಯ ಕೆಳಗೆ ಡೆಂಟಲ್ ಕ್ಲಿನಿಕ್ ಹೊಂದಿದ್ದಾರೆ.
Be the first to comment