ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ?- ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಧಾರವಾಡ

ದೇಶದಿಂದ ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾಕೆ ಮೌನವಹಿಸಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹಂತಕರು ಹಾಗೂ ಕಸಾಯಿ ಖಾನೆ ಬೆಳೆಸಿದ್ದು ಕಾಂಗ್ರೆಸ್‌. ಅದನ್ನು ಈಗ ಬಿಜೆಪಿ ಮುಂದುವರಿಸುತ್ತಿದೆ. ಪ್ರತಿ ವರ್ಷ 50 ಸಾವಿರ ಕೋಟಿ ರೂ. ಮೌಲ್ಯದಷ್ಟು ಗೋಮಾಂಸ ರಫ್ತು ಆಗುತ್ತಿದೆ. ಅದನ್ನು ಪ್ರಧಾನಿ ಮೋದಿ ಅವರು ಯಾಕೆ ಬಂದ್ ಮಾಡುತ್ತಿಲ್ಲ. ಮನಮೋಹನ ಸಿಂಗ್ ಸರ್ಕಾರ ಇದ್ದಾಗ ಮೋದಿಯವರೇ ಗೋ ರಫ್ತು ಬಗ್ಗೆ ಆರೋಪ‌ ಮಾಡಿದ್ದರು ಎಂದು ಕೇಳಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಕುರಿತು ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ಜಾರಿಯಾಗಬೇಕು. ಇಲ್ಲದೇ ಹೋದರೆ ಜನವರಿ ತಿಂಗಳಿನಿಂದಲೇ ಹೋರಾಟ ಆರಂಭ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.ಲಿಂಗಾಯತ ಸಮಾಜದ ಮಹಿಳೆಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಎಲ್ಲಿದ್ದೀರಿ ಲಿಂಗಾಯತ ಸ್ವಾಮಿಗಳೇ… ಮಠ ಬಿಟ್ಟು ಹೊರಗೆ ಬನ್ನಿ, ಹಿಂದುತ್ವವನ್ನು ಕಾಪಾಡುವುದು ಕೇವಲ ನನ್ನೊಬ್ಬನ ಕೆಲಸವಲ್ಲ. ಕೇವಲ ಯಡಿಯೂರಪ್ಪನವರನ್ನು ಬಚಾವ್ ಮಾಡುವದಷ್ಟೇ ಲಿಂಗಾಯತ ಸ್ವಾಮಿಗಳ ಕೆಲಸ ಅಲ್ಲ. ದೇಶ ರಕ್ಷಿಸುವ ಕೆಲಸ ಮಾಡಿ ಎಂದು ತಿಳಿಸಿದ್ದಾರೆ.

CHETAN KENDULI

Be the first to comment

Leave a Reply

Your email address will not be published.


*