ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಘನತ್ಯಾಜ್ಯ ನಿರ್ವಹಣೆ ಕುರಿತು 5 ದಿನದ ತರಬೇತಿಯ ಮುಕ್ತಾಯ ಸಮಾರಂಭಕ್ಕೆ ಆಗಮಿಸಿದ ಶ್ರೀಯುತ ಅಮರೇಶ್ ನಾಯಕ್ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಬಾಗಲಕೋಟೆ ಅವರು ಈ ತರಬೇತಿಯ ಕುರಿತು ಸಂಘದ ಮಹಿಳೆಯರಿಗೆ ಪ್ರಮಾಣ ಪತ್ರ ಕೊಡುವುದರ ಮುಖಾಂತರ ಮೆಚ್ಚುಗೆ ವ್ಯಕ್ತ ಪಡಿಸಿದರು.
2005 ರಿಂದ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಈಗಾಗಲೇ ಕೆಲಸ ಜಾರಿಯಲ್ಲಿದ್ದು ಮಹಿಳೆಯರು ಯಾವ ರೀತಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಇರುವ ಅನುದಾನದ ಬಳಕೆ ಕುರಿತು ತಿಳಿಸಿದರು.
ಜಿ.ಪಂಚಾಯತಿಯಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕಸದ ವಿಲೇವಾರಿಗಾಗಿ ಗಾಡಿಗಳನ್ನು ಕೊಟ್ಟಿದ್ದೇವೆ ಆದರೆ ಸದ್ಯ ವಾಹನದ ಚಾಲನೆ ಇಲ್ಲದ ಕಾರಣ ಎಲ್ಲರ ಮನೆಮನೆಗೆ ಹೋಗಿ ಕಸವನ್ನು ತೆಗೆದುಕೊಳ್ಳುವುದು ಆಗುತ್ತಿಲ್ಲ.
ಕಸದ ವಿಂಗಡನೆ ಕುರಿತು ಜಾಗೃತಿ ಮೂಡಬೇಕು ಜಿಲ್ಲಾ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಇದು ಮೊದಲನೇ ತರಬೇತಿ ಆಗಿರುವುದರಿಂದ ನೀವೆಲ್ಲರೂ ನಿಮ್ಮ ಹಳ್ಳಿಯಲ್ಲಿ ಕಸದ ವಿಲೇವಾರಿ ಕೆಲಸ ಆಗಲೇಬೇಕು.ನಿಮಗೆ ಯಾವ ರೀತಿಯ ಸಹಕಾರ ಬೇಕಾದರೂ ನಾವು ನೀಡುತ್ತೇವೆಂದು ಸಭೆಯಲ್ಲಿ ತಿಳಿಸಿದರು.
ಈ ತರಬೇತಿಯ ಸಂಘದ ಪ್ರತಿನಿಧಿಯಾದ ಶ್ರೀಮತಿ ಚಂದ್ರವ್ವ ಮಾಂಗ ಅವರು ಕಸ ಅಂದರೇನು ? ಕಸದ ವಿಂಗಡನೆ ಅದರ ಮರುಬಳಿಕೆಯ ಕುರಿತು ಕ್ಷೇತ್ರ ಭೇಟಿ ಮಾಡಿದಾಗ ಅವರು ಕಂಡುಕೊಂಡ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು.
ಅದೇ ರೀತಿ ಸಂಘದ ಪ್ರತಿನಿಧಿ ಪುತಳವ್ವ ಹರಿಜನ ಪ್ಲಾಸ್ಟಿಕ್ ಬಳಕೆ ಯಾವ ರೀತಿ ವಿಂಗಡನೆ ಮಾಡಬೇಕು, ಅವರು ಕೂಡ ಎರೆಹುಳು ಗೊಬ್ಬರ ಮತ್ತು ಹಸಿ ಕಸ ಉಳಿದ ಮುಸರೆಯಿಂದ ಗೊಬ್ಬರ ಗ್ಯಾಸ್ ತಯಾರಿಕೆ ಮಾಡುವುದು ವೇದಿಕೆ ಮೇಲೆ ತಿಳಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಜಿ.ಎನ್.ಸಿಂಹ, ಅವರು 5 ದಿನದ ತರಬೇತಿಯನ್ನು ಎಲ್ಲಾ ಮಹಿಳೆಯರು ಸದುಪಯೋಗ ಮಾಡಿಕೊಂಡು ನಿಮ್ಮ ಗ್ರಾಮದಲ್ಲಿ ಉಳಿದ ಮಹಿಳೆಯರನ್ನು ಸೇರಿಸಿಕೊಂಡು ಕಾರ್ಯವನ್ನು ಮಾಡಿ 5 ದಿನದ ತರಬೇತಿ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ಮಹತ್ಮಾ ಗಾಂಧಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಯೋಜನೆಯ ಅಧಿಕಾರಿಗಳಾದ ಶ್ರೀಯುತ ಉಮಾಶಂಕರ್ ಅವರು ಈ ತರಬೇತಿಯಲ್ಲಿ ಎಲ್ಲಾ ಸಂಘದ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದಾರೆ. ಅದೇ ರೀತಿ ನಿಮ್ಮ ಗ್ರಾಮಗಳಲ್ಲಿ ಕಾರ್ಯವನ್ನು ನಿರ್ವಹಿಸಿ ಉಡುಪಿಯ ಜಿಲ್ಲೆಯ ಬಾಗಲಕೋಟೆ ಜಿಲ್ಲೆಯ ಆಗಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೀಚ್ ಸಂಸ್ಥೆ ಆಯೋಜಕರಾದ ಜಿ.ಎನ್.ಕುಮಾರ್, ವಿನೋದ್ ಮತ್ತು ತರಬೇತಿದಾರರಾದ ಶ್ರೀಮತಿ ಶಾರದಾ ಬಜಂತ್ರಿ, ಶ್ರೀಮತಿ ರೇಖಾ ಬಡಿಗೇರ್, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Be the first to comment