ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಅಕ್ರಮ ಅಕ್ಕಿ ಸಾಗಾಟ : ಆರೋಪಿಗಳು ವಶಕ್ಕೆ ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ 500 ಕ್ವಿಂಟಲ್ ಅಕ್ಕಿ ಸೇರಿ ವಾಹನ ಸಮೇತ ಆರೋಪಿಗಳನ್ನು ಹೊನ್ನಾವರ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಎರಡು ಕಂಟೇನರ್ ಲಾರಿಗಳಲ್ಲಿ ಸಾಗಿಸುತ್ತಿದ್ದ ವಿಷಯದ ಖಚಿತ ಮಾಹಿತಿ ಪಡೆದ ಹೊನ್ನಾವರ ಪೋಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 500 ಕ್ವಿಂಟಲ್ ಅಕ್ಕಿ, 2 ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಾವರ ಆಹಾರ ನಿರೀಕ್ಷಕರು ಹಾಗೂ ತಾಲೂಕಾ ದಂಡಾಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. 

CHETAN KENDULI

ಅಕ್ರಮ ಅಕ್ಕಿ ಸಾಗಾಟದ ದೊಡ್ಡ ಜಾಲವೇ ಇದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು ಪೋಲೀಸರು ತನಿಖಾ ಕಾರ್ಯ ಚುರುಕುಗೊಳಿಸಿದ್ದಾರೆ. ಕರ್ಕಿಯಲ್ಲಿರುವ ದಾಸ್ತಾನು ಮಳಿಗೆಯಲ್ಲಿ, ವಶಪಡಿಸಿಕೊಂಡ ಅಕ್ಕಿಯನ್ನು ಒಂದೊಂದೇ ಚೀಲದಂತೆ ತೂಕ ಮಾಡಿ ಇರಿಸಿದ್ದಾರೆ. ದೊಡ್ಡ ದೊಡ್ಡ ಕಂಟೇನರ್ಗಳಲ್ಲಿ ಸಾಗಿಸುತ್ತಿರುವ ಈ ಅಕ್ಕಿಯು ಅನ್ನ ಭಾಗ್ಯದ ಅಕ್ಕಿಯೇ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. 

ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ನಾಗರಾಜ್ ನಾಯ್ಕಡ್, ಹೊನ್ನಾವರ ಸಿಪಿಐ ಶ್ರೀಧರ್ ಎಸ್.ಆರ್, ಪಿ.ಎಸ್.ಐ ಶಶಿಕುಮಾರ್, ನಿರಂಜನ್, ಆಹಾರ ನಿರೀಕ್ಷಕ ವೆಂಕಟರಮಣ, ಹಾಗೂ ಪೋಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*