ಭಟ್ಕಳದ ಪತ್ರಕರ್ತ ಅರ್ಜುನ್ ಮಲ್ಯ ಮೇಲೆ ಹಲ್ಲೆ ಪ್ರಕರಣ, ಆರೋಪಿ ಮಹಾದೇವ ಅರೆಸ್ಟ್ 15 ದಿನಗಳ ನ್ಯಾಯಾಂಗ ಬಂಧನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಗುರುವಾರ ಸಂಜೆ ಬೈಕಿನಲ್ಲಿ ಹಿಂಬಾಲಿಸಿಕೊoಡು ಬಂದ ಆರು ಮಂದಿ ಮುಸುಕುಧಾರಿ ಗೂಂಡಾಗಳಿAದ ವೆಬ್ ಪೋರ್ಟಲ್ ಸಂಪಾದಕನ ಮೇಲೆ ನಡೆದ ಹಲ್ಲೆಗೆ ಸಂಬoಧಿಸಿ ಪ್ರಕರಣದ ಪ್ರಮುಖ ಆರೋಪಿ ಬೆಳಕೆಯ ರಿಕ್ರಿಯೇಷನ್ ಕ್ಲಬ್ ಮಾಲಕ ಮಹಾದೇವ ನಾಯ್ಕ್ ಎಂಬಾತನನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.ಕೆಲವು ದಿನಗಳ ಹಿಂದೆ ಭಟ್ಕಳದಲ್ಲಿನಡೆಯುತ್ತಿರುವ ರಿಕ್ರಿಯೇಷನ್ ಕ್ಲಬ್ ದಂಧೆಗಳ ಕುರಿತು ಕರಾವಳಿ ಸಮಾಚಾರ ವೆಬ್ ಪೋರ್ಟಲ್ ನಲ್ಲಿ ಸಂಪಾದಕ ರಾಘು ಯಾನೇ ಅರ್ಜುನ್ ಮಲ್ಯ ಎಂಬಾತ ವರದಿ ಪ್ರಕಟಿಸಿದ್ದರು. ಗುರುವಾರ ಸಂಜೆ ಸುಮಾರು ೬ ಗಂಟೆಗೆ ಮಹಾದೇವ ನಾಯ್ಕ್ ತನ್ನ ಸಹಚರರ ಜೊತೆಗೆ ಬೈಕಿನಲ್ಲಿ ಬಂದು ರೀಪು ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರಗೊoಡಿದ್ದ ಅರ್ಜುನ ನನ್ನು ಸ್ನೇಹಿತರು ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದರು.

CHETAN KENDULI

ತಕ್ಷಣವೇ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಸರ್ಕಾರೀ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಫೂಟೇಜುಗಳು ಸಹಕರಿಸಿವೆ. ಗುರುವಾರ ಮಧ್ಯಾಹ್ನ ಸುಮಾರು ೩ ಗಂಟೆಗೆ ಆರೋಪಿ ಮಹಾದೇವ ನಾಯ್ಕ ಅನಾರೋಗ್ಯದ ಕಾರಣದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಸಂಜೆ ವೇಳೆ ಇದ್ದಕ್ಕಿದ್ದಂತೆ ಆಸ್ಪತ್ರೆಯ ಅನುಮತಿ ಪಡೆಯದೇ ಹೊರಹೋಗಿದ್ದ. ಅಲ್ಲದೇ ಅರ್ಜುನ್ ಮೇಲೆ ಹಲ್ಲೆ ನಡೆದು ಆತನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತರುವ ಕೆಲವೇ ಹೊತ್ತಿಗೆ ಮುನ್ನ ಆರೋಪಿ ಮಹಾದೇವ್ ನಾಯ್ಕ್ ಆಸ್ಪತ್ರೆಗೆ ಬಂದಿದ್ದು ಬೆಡ್ ಮೇಲೆ ಮಲಗಿದ್ದಾನೆ. ಸಿಸಿಟಿವಿ ಪೂಟೇಜ್ ಪರಿಶೀಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಮುಖ ಆರೋಪಿ ಮಹಾದೇವ್ ನಾಯ್ಕ್ ಎಂಬುದು ತಿಳಿಯುತ್ತಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇನ್ನೂ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಈತನಿಗೆ ೧೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಭಟ್ಕಳಕ್ಕೆ ಭೇಟಿ ನೀಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರೀನಾಥ್ ಅವರು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದು ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಲ್ಲೆ ನಡೆಸಿದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಿದ್ದರೂ ಸಹ ಅವರನ್ನು ಬಂಧಿಸಲಾಗುವುದು. ಈಗಾಗಲೇ ಓರ್ವನನ್ನು ಬಂಧಿಸಿದ್ದು ಉಳಿದವರ ಬಂಧನಕ್ಕೆ ಇಲಾಖೆ ಕ್ರಮ ಕೈಗೊಂಡಿದೆ. ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ಹೆಚ್ಚುವರಿ ಎಸ್.ಪಿ. ಅವರಲ್ಲಿ ಘಟನೆಯನ್ನು ಖಂಡಿಸುತ್ತಾ ಜಿಲ್ಲೆಯಲ್ಲಿ ಇಂತಹ ಘಟನೆ ಮುಂದೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಈ ರೀತಿಯ ಘಟನೆಯಿಂದ ಜಿಲ್ಲೆಯಲ್ಲಿ ನಿರ್ಭೀತ ವರದಿ ಮಾಡುವ ಪತ್ರಕರ್ತರಿಗೂ ಭಯದ ವಾತಾವರಣ ನಿರ್ಮಾಣವಾಗಿದ್ದು ಈ ಕುರಿತು ಸೂಕ್ತ ಕ್ರಮದ ಅವಶ್ಯಕತೆ ಇದೆ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ., ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*