ಲೆಕ್ಕ ಪತ್ರ ನೀಡದ ಅಧ್ಯಕ್ಷರಿಗೆ ಪಾಠಕಲಿಸಲು ಮುಂದಾದ ಯಾದವ ಸಮುದಾಯ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ಯಾದವ ಗೊಲ್ಲ ಸಮುದಾಯದ ಹಿರಿಯ ಮುಖಂಡರ ಸಭೆ ಕರೆಯಲಾಗಿತ್ತು.ದೊಡ್ಡಬಳ್ಳಾಪುರ ತಾಲ್ಲೂಕು ಯಾದವ ಗೊಲ್ಲ ಸಂಘದ ಅಧ್ಯಕ್ಷರಾದ ಪದ್ಮರಾಜ್ ರವರು ಸಂಘದ ಲೆಕ್ಕಪತ್ರ ನೀಡದ ವಿಚಾರವಾಗಿ ಸಭೆ ಸೇರಿದ್ದು ಈ ಸಭೆಯಲ್ಲಿ ಹಲವು ವಿಚಾರಗಳನ್ನು ಕುರಿತು ಚರ್ಚಿಸಲಾಯಿತು ಯಾದವ ಗೊಲ್ಲ ಸಮುದಾಯದ ಕೆಲವು ಹಿರಿಯ ಮುಖಂಡರ ಆಶ್ವಾಸನೆ ಹಾಗೂ ಸಕಾರಾತ್ಮಕ ಸ್ಪಂದನೆಯ ಮೇರೆಗೆ ತಾತ್ಕಾಲಿಕವಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ಯಾದವ ಗೊಲ್ಲ ಸಮುದಾಯದ ಮುಖಂಡ ಕಾಂತರಾಜು ತಿಳಿಸಿದರು ಸಭೆಯ ನಂತರ ಮಾತನಾಡಿದ ಎ ವಿ ನಾರಾಯಣ್ ರವರು ಕಳೆದ ಮೂರು ವರ್ಷಗಳಿಂದ ಹಲವಾರು ನೋಟಿಸ್ ನೀಡಿದರು ಸಹ ಸಂಘದ ಅಧ್ಯಕ್ಷರು ಯಾವುದೇ ರೀತಿಯಾದ ಸಕರತ್ಮಕ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಸಂಘದ ಲೆಕ್ಕಪತ್ರಗಳನ್ನು ಸಮುದಾಯಕ್ಕೆ ನೀಡಿಲ್ಲ ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಲೆಕ್ಕಪತ್ರಗಳು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದ ಅಧ್ಯಕ್ಷರ ವಿರುದ್ಧ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಯಾದವ ಗೊಲ್ಲ ಸಮುದಾಯದ ಮುಖಂಡರಾದ ಸುಬ್ರಮಣಿ, ಚಂದ್ರಶೇಖರ್ ಎನ್, ನಾಗೇಂದ್ರ, ರಾಮದಾಸ್, ಕೃಷ್ಣಮ್ ರಾಜು, ಅಂಬರೀಷ್, ಗೋಪಾಲ್, ಕುಮಾರ್ ಹುಲಿಯಾಯಾದವ್, ವಕೀಲರಾದ ಬಸವರಾಜು, ನರಸಿಂಹ ಹಾಗೂ ತಾಲ್ಲೂಕಿನ ಯಾದವ ಗೊಲ್ಲ ಸಮುದಾಯದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.

CHITAN KENDULI

Be the first to comment

Leave a Reply

Your email address will not be published.


*