ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕ ರವಿವಾರ ಆಯೋಜಿಸಿದ್ದ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ಕೆ ಪ್ರಥಮ ಪ್ರಜೆ ಸೇರಿದಂತೆ, ಗಣ್ಯರಿಂದ ಹಿಡಿದು, ಯುವಕರು ಬಹುಸಂಖ್ಯೆಯಲ್ಲಿ ಸೇರಿ ಶ್ರಮದಾನದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ ಸಾರ್ವಜನಿಕರು, ಸಂಘ ಸಂಸ್ಥೆಯ ಪ್ರಮುಖರು ಹಾಗೂ ವಿವಿಧ ಸಮಾಜದ ಮುಖಂಡರು ಮುಕ್ತಿಧಾಮದೊಳಗೆ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಹರಡಿ ಬಿದ್ದಿದ್ದ ಪ್ಲಾಸ್ಟಿಕ್, ಕಸ-ಕಡ್ಡಿಗಳನ್ನ ತೆರವುಗೊಳಿಸಲಾಯಿತು. ಸ್ಮಶಾನ ಭೂಮಿಯ ಒಳಗೆ ಗುಡ್ಡೆಯಾಗಿ ಬಿದ್ದಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಿ ತಗ್ಗಿನ ಪ್ರದೇಶಕ್ಕೆ ತುಂಬಲಾಯಿತು. ಚಿತಾಗಾರದ ಒಳಗಿನ ಬೂದಿ ಸಂಗ್ರಹಕ ಪ್ರವೇಶದ್ವಾರದ ಗೇಟ್‍ಗಳಿಗೆ ಗ್ರೀಸ್ ಹಾಕಿ ಸರಳಗೊಳಿಸಲಾಯಿತು.
ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಮಾಧ್ಯಮದೊಡನೆ ಮಾತನಾಡಿ ಜರ್ನಲಿಸ್ಟ್ ಯುನಿಯನ್ ಯಲ್ಲಾಪುರ ಘಟಕ ಹಮ್ಮಿಕೊಂಡಿರುವ ಸ್ಮಶಾನ ಸ್ವಚ್ಛತಾ ಕಾರ್ಯ ಶ್ಲಾಘನೀಯವಾದದ್ದು, ಯಾವುದೇ ರಾಜಕೀಯ ಸಂಘಟನೆಗಳು ಕರೆ ನೀಡಿದ್ದರೆ ಈ ಪ್ರಮಾಣದಲ್ಲಿ ಜನ ಶ್ರಮದಾನಕ್ಕೆ ಬರುತ್ತಿರಲಿಲ್ಲ. ಶ್ರಮದಾನದ ಮೂಲಕ ಸ್ಮಶಾನದ ಬಹುತೇಕ ಎಲ್ಲ ಭಾಗಗಳನ್ನು ಸ್ವಚ್ಛ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಈ ರುದ್ರ ಭೂಮಿ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.ಪ. ಪಂ. ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ, ಜರ್ನಲಿಸ್ಟ್ ಯುನಿಯನ್ ಘಟಕದವರು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ. ಪ್ರತಿಯೊಬ್ಬರೂ ಕೂಡ ಮನೆ ಹಾಗೂ ದೇವಸ್ಥಾನವನ್ನು ಸುಂದರವಾಗಿರಿಸುವಂತೆ, ಸ್ಮಶಾನವನ್ನು ಕೂಡ ಸ್ವಚ್ಛವಾಗಿರಿಸಬೇಕು ಎಂದರು.
ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹಿಂದೂ ರುದ್ರಭೂಮಿಯನ್ನು ಸ್ವಚ್ಛ ಮಾಡಿಸುವ ಮೂಲಕ ಜರ್ನಲಿಸ್ಟ್ ಯೂನಿಯನ್ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಸ್ಮಶಾನಗಳಲ್ಲಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಭಯವನ್ನು ಹೋಗಲಾಡಿಸವಂತಹ ಕಾರ್ಯ ಮಾಡಿರುವುದು ಶ್ಲಾಘನೀಯ.
ಬಿಜೆಪಿ ತಾಲೂಕಾ ಮಂಡಲ ಘಟಕದ ಅಧ್ಯಕ್ಷ ಜಿ. ಎನ್. ಗಾಂವ್ಕರ(ಜಿ.ಎನ್.ಜಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕರ, ಉದ್ಯಮಿ ಬಾಲಕೃಷ್ಣ ನಾಯಕ್, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ, ಪ್ರಮುಖರಾದ ನಾರಾಯಣ ನಾಯಕ (ನನ್ನಿ), ಕಿರಣ ಗಾಂವ್ಕರ, ಟಿ.ಎಸ್ ತಿಲಕರಾಜ, ಗಿರೀಶ ಭಾಗ್ವತ, ಹೇಮಂತ ದುರಂದರ, ಪ್ರದೀಪ ಯಲ್ಲಾಪುರಕರ, ಸುಧಾಕರ ಪ್ರಭು, ಪವನ ಕಾಮತ, ಸಚಿನ್ ಕೆಕರೆ, ಗಿರೀಶ ಪೈ, ರವಿರಾಜ ಪ್ರಭು, ಗಜು ನಾಯಕ, ನವೀನ ನಾಯ್ಕ, ಶಿವಕುಮಾರ ನಾಯ್ಡು, ಕಿರಣ ಗಾಂವ್ಕರ, ವಿನೋದ ತಳೇಕರ, ತುಳಸಿದಾಸ ನಾಯ್ಕ, ಶ್ರೀನಿವಾಸ ಮುರ್ಡೇಶ್ವರ್, ಪರಮೇಶ್ವರ ಕಿನ್ನಾಳ, ಗಣಪತಿ ಪಟಗಾರ, ವೀರ ಶಿವಾಜಿ ಸೇನೆ ಸುಭಾಸ ಕಳಸೂಕರ, ಸಂಜಯ ಮಿರಾಶಿ, ವಿಶಾಲ ವಾಳಂಬಿ, ರಾಮಚಂದ್ರ ಮರಾಠೆ, ಶೇಷು ಕಲ್ಯಾಣಕರ, ಅನೀಲ ನೀಲಕಂಠ ಮಿರಾಶಿ. ಪಟ್ಟಣ ಪಂಚಾಯತಿ ಆರೋಗ್ಯಾಧಿಕಾರಿ ಗುರು ಗಡಗಿ, ಪ.ಪಂ ಸಿಬ್ಬಂದಿಗಳಾದ ಪ್ರಕಾಶ ಮಾದರ್, ವಿಜಯಕುಮಾರ ಮಾದರ್, ಯೆಸುರತ್ಮಂ, ಲಾಜರ್, ಮತ್ತು ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಶಂಕರ ಭಟ್ ತಾರೀಮಕ್ಕಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಮದ್ಗುಣಿ, ಕಾರ್ಯದರ್ಶಿ ಕೇಬಲ್ ನಾಗೇಶ, ಉಪಾಧ್ಯಕ್ಷ ವಿ.ಜಿ.ಗಾಂವ್ಕರ, ಖಜಾಂಚಿ ಸತೀಶ ನಾಯ್ಕ, ಸದಸ್ಯ ಜಗದೀಶ ನಾಯಕ ಮುಂತಾದವರು ಇದ್ದರು.
Be the first to comment