ಜಿಲ್ಲಾ ಸುದ್ದಿಗಳು
ಕಾರವಾರ
ಕಾಳಿ ನದಿಯಲ್ಲಿ ಮರಳು ತೆಗೆಯಲು ಪರಿಸರ ಇಲಾಖೆ ಪರವಾನಿಗೆ ನೀಡಿ ಎರಡು ತಿಂಗಳದರೂ ಜಿಲ್ಲಾಡಳಿತ ಅಧಿಕೃತ ಪರವಾನಗಿ ನೀಡದೇ ಇರುವುದನ್ನು ಮಾಜಿ ಶಾಸಕ ಸತೀಶ್ ಸೈಲ್ ಅವರು ನಗರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಕಾಳಿ ನದಿಯಲ್ಲಿ ಪಾರಂಪರಿಕ ಮರಳು ಸಾಗಣಿಕೆ ಕಸಬುದಾರರು, ಮರಳು ತೆಗೆದು ಸ್ಥಳೀಯವಾಗಿ ಮನೆ ಕಟ್ಟಲು , ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಮರಳು ಉಪಯೋಗಿಸುತ್ತಿದ್ದರು. ಆದರೆ ಕಲವು ವರ್ಷಗಳಿಂದ ನಾನಾ ಕಾರಣದಿಂದಾಗಿ ಮುಖ್ಯವಾಗಿ ಪರಿಸರ ಇಲಾಖೆಯಿಂದ ಪರವಾನಗಿ ದೊರೆಯದ ಕಾರಣ ಮರಳುಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬಡವರಿಗೆ ಸರ್ಕಾರದಿಂದ ಮಂಜೂರಾದ ವಸತಿ ನಿರ್ಮಾಣ ಮಾಡಲು ಕಷ್ಟವಾಗುತ್ತಿದೆ. ಸದ್ಯ ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸಲು ಪರಿಸರ ಇಲಾಖೆ ಅವಕಾಶ ಕಲ್ಪಿಸಿದೆ. ಆದರೆ ಜಿಲ್ಲಾಡಳಿತ ಮರಳು ಸಮಿತಿ, ಮರಳು ಕಸಬುದಾರರಿಗೆ ಅಧಿಕೃತ ಪರವಾನಗಿ ನೀಡದೇ ಇರುವುದಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Be the first to comment