ರಾಜ್ಯ ಸುದ್ದಿಗಳು
ಕುಮಟಾ
ದಿನೆ ದಿನೇ ಅಕ್ರಮ ಜಾನುವಾರುಗಳ ಸಾಗಾಟ ಅತಿಯಾಗುತ್ತಲೆ ಇದ್ದು, ಅಂತೆಯೇ ಇಂದು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆ ಇಲ್ಲದೆ ಕೊಲ್ಲಾಪುರದಿಂದ ಪಾಂಡಿಚೇರಿಗೆ ಅಶೋಕ್ ಲೈಲೆಂಡ್ ಕಂಪನಿಯ ಲಾರಿ ಮೂಲಕ 13 ಕೋಣ ಹಾಗೂ 09 ಎಮ್ಮೆ ಒಟ್ಟು 22 ಜಾನುವಾರುವನ್ನು ಕುಮಟಾ ಪೊಲೀಸರು ರಕ್ಷಿಸಿದ್ದಾರೆ.
ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸ್ ತಪಾಸಣೆ ನಡೆಸಿದ ವೇಳೆ ಲಾರಿಯಲ್ಲಿ ಅಕ್ರಮವಾಗಿ ಕೋಣ ಹಾಗೂ ಎಮ್ಮೆಗಳನ್ನು ಸಾಗಿಸುತ್ತಿರುವುದು ತಿಳಿದು ಆರೋಪಿತರ ಸಮೇತ ವಾಹನವನ್ನು ಪಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೋಣ ಹಾಗೂ ಎಮ್ಮೆಗಳನ್ನು ಹೊಸಾಡ್ ಗೋಶಾಲೆಗೆ ಕಳುಹಿಸಲಾಗಿದೆ. ಈ ಸಂಬoಧ ನಾಲ್ವರನ್ನು ಬಂಧಿಸಲಾಗಿದೆ.
ವಾಹನವನ್ನು ಕುಮಟಾ ಪೊಲೀಸ್ ಠಾಣೆಗೆ ಕರೆತಂದು ಕುಮಟಾ ಪಿ.ಎಸ್.ಐ ರವಿ ಗುಡ್ಡಿ ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿನೇ ದಿನೇ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.
Be the first to comment