ರಾಜ್ಯ ಸುದ್ದಿಗಳು
ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನೂತನ ಎಸ್.ಪಿ. ಡಾ. ಸುಮನ ಡಿ. ಪೆನ್ನೇಕರ.ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಮಾತ್ರವೇ ಇದೆ ಎಂದು, ಘಟ್ಟಿಯಾಗಿ ಕುರ್ಚಿ ಹಿಡಿದು ಕೂರುವ ಅಧಿಕಾರಿಗಳನ್ನು ನೋಡಿ ಬೇಸತ್ತ ಜನರಿಗೆ, ಎಸ್.ಪಿ ಯವರ ತಾಲೂಕಿನ ಭೇಟಿ ಹರ್ಷ ತಂದಿದೆ.
ಜಿಲ್ಲೆಯ ಪ್ರತೀ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ ಹಲವು ಅಧಿಕಾರಿಗಳಿಗೆ ಎಸ್.ಪಿ. ಯವರ ಕಾರ್ಯ ಮಾರ್ಗಸೂಚಿಯಾಗಬೇಕಿದೆ. ಎಸ್.ಪಿಯವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಜೋಯಿಡಾ ತಾಲ್ಲೂಕಿನ ಪೊಲೀಸ್ ಠಾಣೆ ಭೇಟಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ರೀತಿ ಜಿಲ್ಲೆಯ ಎಲ್ಲ ತಾಲೂಕಿಗೂ ಭೇಟಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಮೆಂಟ ಮಾಡಿದ ಹಲವರು ಸ್ಥಳೀಯ ಠಾಣೆಗಳ ಕೆಲವು ಹುಳುಕುಗಳನ್ನು ಎತ್ತು ತೋರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Be the first to comment