ರಾಜ್ಯ ಸುದ್ದಿಗಳು
ಶಿರಸಿ
ಬಾವಿಯ ನೀರು ಕಲುಷಿತವಾದರೆ ಕುಡಿಯುವುದೇನು? ಗಟಾರದ ನೀರು ಬಾವಿಗೇ ಬಂದಿಳಿದರೆ ಗತಿಯೇನು?ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಗರ ಭಾಗದಲ್ಲಿದೆ ಇಂಥದ್ದೊಂದು ಸಮಸ್ಯೆ ಎಂದರೆ ನೀವೆಂದಾದರೂ ನಂಬುವಿರೇ?ಇದು ನಿಜ ಶಿರಸಿಯ ಮಾರಿಕಾಂಬಾ ನಗರದ ವಾರ್ಡ ಸಂಖ್ಯೆ 25 ರ ಎರಡನೇ ಅಡ್ಡ ರಸ್ತೆಯಲ್ಲಿರುವ ಗಟಾರ ಕುಸಿದಿದ್ದು, ಅಕ್ಕ ಪಕ್ಕದ ಮನೆಯ ಜನರು ಮೋರಿ ನೀರು ಬಾವಿಗಿಳಿದ ನಂತರ ಕುಡಿಯಲು ಬಳಸುವಂತಹ ದುರ್ದೈವ ಎದುರಾಗಿದೆ.
ಈ ಹಿಂದೆ ಗಟಾರ ನಿರ್ಮಿಸಲಾಗಿತ್ತು ಎಂಬ ಮಾಹಿತಿ ಇದ್ದು, ಅದು ಈಗ ಕುಸಿತಕ್ಕೆ ಒಳಗಾಗಿದೆ. ಅಲ್ಲಲ್ಲಿ ಹೊಂಡಗಳಾಗಿದ್ದು, ನಿಂತ ನೀರು ಅಕ್ಕಪಕ್ಕದ ಮನೆಯ ಬಾವಿಗೆ ಇಳಿಯಲಾರಂಭಿಸಿವೆ. ಇಂತಹ ಕಲುಷಿತ ನೀರು ಕುಡಿಯುವ ಅಯೋಮಯ ಪರಿಸ್ಥಿತಿ ಮಾತ್ರ ಜನರದ್ದಾಗಿದೆ.ವಾರ್ಡ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಸರಿ ಪಡಿಸುವ ತನಕ ಯಮಯಾತನೆ ಅನುಭವಿಸುವ ಕಾರ್ಯ ತಪ್ಪಲಾರದಾಗಿದೆ.ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಇತ್ತ ಗಮನಹರಿಸಿ ತಕ್ಷಣ ಇದ್ದಕ್ಕೊಂದು ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Be the first to comment