ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ (ಹಿಂದುಳಿದ ವರ್ಗ ಪ್ರವರ್ಗ-೧)ರ ನೂತನ ಉಪಾಧ್ಯಕ್ಷರಾಗಿ ಬಿ.ಕೆ.ನಾರಾಯಣಸ್ವಾಮಿ ಆಯ್ಕೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕರ್ನಾಟಕ ರಾಜ್ಯ ಸರಕಾರದ ಉದ್ಯಮವಾದ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ (ಹಿಂದುಳಿದ ವರ್ಗ ಪ್ರವರ್ಗ-೧)ರ ಒಕ್ಕೂಟದಲ್ಲಿ ರಾಜ್ಯದ ನೂತನ ಉಪಾಧ್ಯಕ್ಷರಾಗಿ ಹಾಗೂ ೧೦ ಜಿಲ್ಲೆಗಳಿಗೆ ಉಸ್ತುವಾರಿ ಅಧ್ಯಕ್ಷರಾಗಿ ಬಿ.ಕೆ.ನಾರಾಯಣಸ್ವಾಮಿ ಅವರನ್ನು ರಾಜ್ಯಾಧ್ಯಕ್ಷ ವಿಠ್ಠಲ ಬಿ.ಗಣಚಾರಿ ಹಾಗು ರಾಜ್ಯದ ೩೦ ಜಿಲ್ಲೆಗಳ ೪೬ ಜಾತಿ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಸಮ್ಮೂಕದಲ್ಲಿ ಬೆಂಗಳೂರಿನ ಕಚೇರಿಯಲ್ಲಿ ಆಯ್ಕೆ ಮಾಡಲಾಗಿದೆ.  ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ನಾರಾಯಣಸ್ವಾಮಿ ಅಧಿಕಾರ ವಹಿಸಿಕೊಂಡು ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟವು ೧೯೬೬ರ ಪ್ರಕಾರ ರಾಜ್ಯದಲ್ಲಿ ಸುಮಾರು ೧ಕೋಟಿ ೩೦ಲಕ್ಷ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಸಂಖ್ಯೆಯನ್ನು ಹೊಂದಿದೆ. ಒಟ್ಟು ೪೬ ಜಾತಿಗಳು ಬರಲಿದ್ದು, ಈ ಜಾತಿಗಳಲ್ಲಿ ತೀರ ಹಿಂದುಳಿದವರನ್ನು ಗುರ್ತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ನೀಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗಿದೆ. ೧೦ ಜಿಲ್ಲೆಗಳಾದ ಬೆಂಗಳೂರು ವಲಯದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ನೀಡಿರುತ್ತಾರೆ ಎಂದು ಮಾಹಿತಿ ನೀಡಿದರು. 

CHETAN KENDULI

ಅನುದಾನ ಬಿಡುಗಡೆಗೆ ಸರಕಾರಕ್ಕೆ ಒತ್ತಾಯ: ಈಗಾಗಲೇ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗಾಗಿ ಒಕ್ಕೂಟದಿಂದ ೨೦೦ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಈ ಅನುದಾನವನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಒತ್ತಾಯ ಮಾಡಲಾಗಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದರೆ, ಕೂಡಲೇ ೪೬ ಹಿಂದುಳಿದ ವರ್ಗ ಪ್ರವರ್ಗ-೧ರಡಿಯಲ್ಲಿ ಬರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಳ ೪೬ ಜಾತಿಗಳಡಿ ಬರುವ ಜಾತಿಗಳವರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಅನುದಾನದ ಅವಶ್ಯಕತೆ ಇರುತ್ತದೆ ಎಂದು ಹೇಳಿದರು. 

ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಒಕ್ಕೂಟದ ರಾಜ್ಯಾ ಅಧ್ಯಕ್ಷ ವಿಠ್ಠಲ ಬಿ.ಗಣಚಾರಿ, ಗೌರವಾಧ್ಯಕ್ಷ ಚಿತ್ರದುರ್ಗ ಸಿ.ಮಹಾಲಿಂಗಪ್ಪ, ಒಕ್ಕೂಟದ ಪದಾಧಿಕಾರಿಗಳಾದ ತುಕಾರಾಂನಾಗಪ್ಪ, ರಮೇಶ್, ಮೇಗಪ್ಪ, ವೀರೇಶ್, ಅನಂತಕೃಷ್ಣಯಾದವ್, ಮಂಜಪ್ಪ, ಬಲಭೀಮಬಾಬು, ಬಿ.ವಿ.ಚಂದ್ರಯ್ಯ, ರಾಜೇಂದ್ರ, ಡಾ.ಕೆ.ಜಗದೀಶ್, ಮಂಜುನಾಥ್, ಪ್ರತಾಪ್‌ಕುಮಾರ್, ರೂಪ.ಎಂ, ನಾಗರಾಜ್, ಹರೀಶ್‌ಮೂರ್ತಿ, ಅಶೋಕ್ ಕುಮಾರ್, ಹುಲ್ಲಪ್ಪ, ನಾಗರಾಜ್, ಎಂ.ಪ್ರಕಾಶ್, ಶಂಕರ್, ತಿಪ್ಪಣ್ಣ, ಕೆ.ಶ್ರೀನಿವಾಸ್, ಸರುಕ್ಷಾ ಮಂಜುನಾಥ್, ವಿಲಾಸ್ ಕುಮಾರ್ ಸಿಂಧೆ, ಕರುಣಾ ಗುರುಡಾಕರ, ಕುಮಾರ್.ಎನ್.ಕೆ., ಗುರಪ್ಪಕನ್ನೂರ, ಜಯರಾಮು, ಹನುಮಂತ ಬಾಳಪ್ಪ ಯಾದವ್, ನಾಗೋಜಿರಾವ್ ಶಿಂಧೆ, ಬಿ.ವಿ.ಬೋಸ್ಲೆ, ಚಂದ್ರಶೇಖರ್, ರಂಗಸ್ವಾಮಿ, ಕಲ್ಪನಾ ಜೋಶಿ, ಚೈತ್ರಾ, ಡಾ.ನೇತ್ರಾವತಿ, ಜ್ಯೋತಿ, ಕೆ.ತೇಜಸ್ವಿನಿಯಾದವ್, ಡಾ.ಪೂರ್ಣಿಮಾ, ಇಂದಿರಾ, ಸ್ವಪ್ನ, ಜಯಬಾಯಿ, ಲಕ್ಷ್ಮೀ ವೆಂಕಟೇಶ, ಸಚಿನ್ ದಳವಾಯಿ, ರಾಜೇಶ್, ರಾಘವೇಂದ್ರ, ಗಿರೀಶ್, ಸಂತೋಷ್, ಶ್ರೀನಿವಾಸ್ ಮೂರ್ತಿ, ಚಂದ್ರಶೇಖರ್, ಸುರೇಶ್, ಮತ್ತಿತರರು ಇದ್ದರು. 

Be the first to comment

Leave a Reply

Your email address will not be published.


*