2 ತಲೆ ಹೋಲುವ ವಿಶೇಷ ಮಗು ಜನನ : ತಾಯಿ ಸುರಕ್ಷಿತ, ಮಗು ಚಿಂತಾಜನಕ..!!

ವರದಿ - ಜೀವೋತ್ತಮ ಪೈ

ರಾಜ್ಯ ಸುದ್ದಿಗಳು 

ಭಟ್ಕಳ

ಅಂಕೋಲಾದ ಹೊನ್ನಿಕೇರಿ ಮೂಲದ ದಂಪತಿಗೆ ಈ ಮಗು ಜನಿಸಿದೆ. ಹೆರಿಗೆಗೂ ಮುನ್ನ ಭಟ್ಕಳದಲ್ಲಿ ಸ್ಕ್ಯಾನಿಂಗ್​ ಮಾಡಿದಾಗ ಮಗು 2 ತಲೆ ಹೋಲುವುದನ್ನು ಕಂಡು ವೈದ್ಯರಿಗೆ ಅಚ್ಚರಿಯಾಗಿತ್ತು. ಮಹಿಳೆ ಸುಮಾರು 8 ತಿಂಗಳವರೆಗೆ ಕುಮಟಾದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆ ಗಳಿಗೆಯಲ್ಲಿ ವೈದ್ಯರು ಕೈಚೆಲ್ಲಿದಾಗ ಗರ್ಭಿಣಿ ಮಣಿಪಾಲ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಯೂ ವೈದ್ಯರು ಮಗು ಬದುಕುವ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಇಲ್ಲಿ ಚಿಕಿತ್ಸೆ ವೆಚ್ಚವೂ ಹೆಚ್ಚಾಗಬಹುದು ಎಂದಿದ್ದರಂತೆ. ಈ ಕಾರಣದಿಂದಾಗಿ ಮಹಿಳೆ ಭಟ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದರು.

CHETAN KENDULI

ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ಕ್ಲಿಷ್ಟಕರ ಸ್ಥಿತಿಯಲ್ಲೂ ಈ ಪ್ರಕರಣವನ್ನು ತಮ್ಮೆಲ್ಲ ಅನುಭವದಿಂದ ಸಹಜ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಕ್ಷೇಮವಾಗಿದ್ದು, ಮಗು ಜೀವಂತವಾಗಿದ್ದರೂ ಬದುಕುವ ಲಕ್ಷಣ ಕಡಿಮೆ ಎಂದು ವೈದ್ಯಾಧಿಕಾರಿ ಡಾ. ಸವಿತಾ ಕಾಮತ್​ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*