ಇದು ಕೇವಲ ಪ್ರಾರಂಭ ದೊಡ್ಡಬಳ್ಳಾಪುರ ನಗರ ಸಭೆಯಿಂದ ರನ್ ಆರಂಭ – ಕಂದಾಯ ಸಚಿವ ಆರ್. ಅಶೋಕ್

ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

 ಭಾರೀ ಪ್ರತಿಷ್ಠೆಯ ಚುನಾವಣೆ ಆಗಿದ್ದ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಇಂದು ಅಧ್ಯಕ್ಷ ಸ್ಥಾನದ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿಯು ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ಕಾರಣದಿಂದಾಗಿ ಕಾಂಗ್ರೆಸ್ 11 ಮತಗಳು ಹಾಗೂ ಬಿಜೆಪಿ 22 ಮತಗಳನ್ನು ಪಡೆದುಕೊಂಡಿದ್ದು ಬಿ ಜೆ ಪಿ ಪಕ್ಷವು ಭಾರಿ ಅಂತರದ ಮತಗಳಿಂದ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ಪಡೆದುಕೊಂಡಿದ್ದು . ದೊಡ್ಡಬಳ್ಳಾಪುರ ನಗರಸಭಾ ನೂತನ ಅಧ್ಯಕ್ಷರಾಗಿ 9 ನೇ ವಾರ್ಡಿನ ಬಿ ಜೆ ಪಿ ಅಭ್ಯರ್ಥಿಯಾದ ಸುಧಾರಾಣಿ ಹಾಗೂ ನೂತನ ನಗರಸಭಾ ಉಪಾಧ್ಯಕ್ಷರಾಗಿ 29ನೇ ವಾರ್ಡಿನ ಜೆ ಡಿ ಎಸ್ ಅಭ್ಯರ್ಥಿಯಾದ ಫರ್ಹನಾ ತಾಜ್ ಆಯ್ಕೆಯಾಗಿದ್ದಾರೆ.

CHETAN KENDULI

 ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್ ಮಾತನಾಡಿ ನಗರಸಭಾ ಚುನಾವಣೆಯಲ್ಲಿ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಸಮ್ಮತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಉತ್ತಮ ಆಡಳಿತ ನೀಡಲು ಈ ಹೊಂದಾಣಿಕೆ ಸಹಕಾರಿಯಾಗಿದೆ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆಗಳ ಸಚಿವರಾದಂತಹ ಎಂಟಿಬಿ ನಾಗರಾಜ್ ರವರ ಮುಖೇನ ಹಲವು ಅನುದಾನಗಳು ದೊಡ್ಡಬಳ್ಳಾಪುರ ನಗರಕ್ಕೆ ಸಿಗಲಿದ್ದು ನಗರದ ಅಭಿರುದ್ದಿ ಕಾರ್ಯ ಮತ್ತು ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರಿದ್ದು ನಗರಸಭಾ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಉಪಾಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಹೀನಾಯ ಸೋಲು ಮತ್ತು ಬಾರಿ ಮುಖಭಂಗವನ್ನು ಉಂಟುಮಾಡಿದೆ.ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ವಿಜಯೋತ್ಸವ ಆಚರಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು

 ನಗರಸಭಾ ನೂತನ ಅಧ್ಯಕ್ಷರಾಗಿ ಸುಧಾರಾಣಿ ಹಾಗೂ ಉಪಾಧ್ಯಕ್ಷರಾಗಿ ಫಾರ್ಹನಾ ತಾಜ್ ಅವರನ್ನು ಆಯ್ಕೆ ಮಾಡಿ ಅನುಮೋದನೆ ಪತ್ರ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ಇದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮದ ಉಸ್ತುವಾರಿಗಳು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವರಾದ ಎಂಟಿಬಿ ನಾಗರಾಜ್ ತಿಳಿಸಿದರು

Be the first to comment

Leave a Reply

Your email address will not be published.


*