ಜಿಲ್ಲಾ ಸುದ್ದಿಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಇದ್ದ ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘವು ಸಲ್ಲಿಸಿದ ಮನವಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿ ರವರು ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕೊಡುಗೆಯಾಗಿ ರಾಜ್ಯ ಸರಕಾರಿ ನೌಕರರಿಗೆ ಶೇಕಡ 3% ತುಟ್ಟಿಭತ್ಯೆಯನ್ನು ದಿನಾಂಕ :01-07-2021 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸರ್ಕಾರವು ಮಂಜೂರು ಮಾಡಿ ಸರ್ಕಾರಿ ಆದೇಶ ಹೊರಡಿಸಿದೆ.
ಬಾಗಲಕೋಟೆ:ಮನವಿ ಸಲ್ಲಿಸಿದ ಕೇವಲ 24 ಗಂಟೆಯೊಳಗಾಗಿ ಹಾಗೂ ಕೇಂದ್ರ ಸರಕಾರ ಮಂಜೂರು ಮಾಡಿದ ತುಟ್ಟಿ ಭತ್ಯೆಗೆ ಸರಿಸಮಾನವಾಗಿ ತುಟ್ಟಿಭತ್ಯೆಯನ್ನು ಮಂಜೂರು ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಾಕ್ಷರಿ ರವರಿಗೆ ಹಾಗೂ ಸಮಸ್ತ ರಾಜ್ಯ ಪದಾಧಿಕಾರಿಗಳಿಗೆ ಇಳಕಲ್ ತಾಲೂಕಾ ರಾಜ್ಯ ಸರಕಾರಿ ನೌಕರರ ತಾಲ್ಲೂಕಾ ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ ಹಾಗೂ ಪದಾಧಿಕಾರಿಗಳು ಅನಂತಾನಂತ ಧನ್ಯವಾದಗಳನ್ನು ತಿಳಿಸುತ್ತ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Be the first to comment