ಮನೆಗಳಿಗೆ ನುಗ್ಗಿದ ಕೊಳಚೆ ನೀರು ಕ್ಯಾರೇ ಎನ್ನದ ಕಾರ್ಪೋರೇಟರ್

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ 25ನೇ ವಾರ್ಡ ಮಾರುತಿ ನಗರದ ಕೆಲ ಮನೆಗಳಿಗೆ ಮಳೆಯ ನೀರು ನುಗ್ಗಿದ್ದು ಸ್ಥಳೀಯ ಕಾರ್ಪೊರೇಟರ್ ಸಕಾರಾತ್ಮಕ ಸ್ಪಂದನೆ ನೀಡದಿರುವುದು ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮಾರುತಿ ನಗರದ ಕೆಲ ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದು ತಡರಾತ್ರಿಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

CHETAN KENDULI

ಈ ಕುರಿತಾಗಿ ಸ್ಥಳೀಯ ಕಾರ್ಪೊರೇಟರ್ ಗಳಿಗೆ ಸುಮಾರು ಬಾರಿ ಕರೆ ಮಾಡಿದರು ಸ್ಥಳಕ್ಕೆ ಭೇಟಿ ನೀಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಈ ಕುರಿತಾಗಿ ಮಾತಾಡಿದ ಸ್ಥಳೀಯ ರಾಜುರವರು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ರಸ್ತೆಯು ಅರ್ಧಕ್ಕೆ ನಿಲ್ಲಿಸಲಾಗಿದೆ ಕಳೆದ 20 ವರ್ಷಗಳಿಂದಲೂ ನಮ್ಮ ಪರಿಸ್ಥಿತಿ ಹೀಗೆ ಇದೆ ಸ್ಥಳೀಯ ಜನಪ್ರತಿನಿಧಿಗಳು ಈ ಕುರಿತಾಗಿ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಗಳಲ್ಲಿ ಮಾತ್ರ ಮನೆಮನೆಗೆ ಹೋಗುವ ಜನಪ್ರತಿನಿಧಿಗಳು ಸರ್ವಜನಿಕರಿಗೆ ಕಷ್ಟ ಎದುರಾದಾಗ ಬರದಿರುವುದು ವಿಪರ್ಯಾಸವೇ ಸರಿ ಇನ್ನಾದರೂ ಸ್ಥಳೀಯ ಸದಸ್ಯರು ಎಚ್ಚೆತ್ತುಕೊಳ್ಳಲಿ ಜನರ ಕಷ್ಟಗಳಿಗೆ ಸ್ಪಂದಿಸಲಿ ಎಂದು ಅಂಬಿಗ ನ್ಯೂಸ್ ಆಶೀಸಿಸುತ್ತದೆ.

Be the first to comment

Leave a Reply

Your email address will not be published.


*