ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ಹೊನ್ನಾವರದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ , ರಾಜ್ಯಪಾಲರಿಗೆ ಮನವಿ

ವರದಿ- ಸುಚಿತ್ರಾ ನಾಯ್ಕ.ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ರಾಜ್ಯದಲ್ಲಿ ಮಹಿಳೆಯರ ಮೇಲೆ ದಿನನಿತ್ಯ ಆತ್ಯಾಚಾರ, ಲೈಂಗಿಕ್ ದೌರ್ಜನ್ಯ ನಡೆಯುತ್ತಿದ್ದು, ತಕ್ಷಣ ಅವುಗಳಿಗೆ ಕಡಿವಾಣ ಹಾಕುವಂತೆ ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ ರಾಜ್ಯಪಾಲರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

CHETAN KENDULI

ಮಹಿಳಾ ಕಾಂಗ್ರೇಸ್ ಕಾರ್ಯಕರ್ತರು ಇಂದು ಹೊನ್ನಾವರ ತಹಶೀಲ್ದಾರ ಕಛೇರಿಯ ಎದುರು ಸಾಂಕೇತಿಕವಾಗಿ ಪ್ರತಿಭಟಿಸಿ ತಹಶೀಲ್ದಾರ ನಾಗರಾಜ್ ನಾಯ್ಕಡ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ರವಾನಿಸಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆರಕ್ಷಣೆಇಲ್ಲದಂತಾಗಿದೆ.ರಾಜ್ಯಾಧ್ಯಂತಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಮಹಿಳೆಯರು ಮಕ್ಕಳು ಧೈರ್ಯದಿಂದ ತಿರುಗಾಡುವ ಸ್ಥಿತಿ ಇಲ್ಲದಂತಾಗಿದೆ.ಇತ್ತೀಚಿಗೆ ಮೈಸೂರಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವೇ ಇದಕ್ಕೆ ಸಾಕ್ಷಿ.

ಈ ಕುರಿತಂತೆ ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರ ಉಡಾಪೆಯ ಮಾತುಗಳನ್ನಾಡುತ್ತಿದ್ದು, ಮಹಿಳೆಯರು ರಾತ್ರಿ ವೇಳೆ ಏಕೆ ತಿರುಗಾಡಬೇಕು ಅಂತಾ ಪ್ರಶ್ನಿಸುತ್ತಿದ್ದಾರೆ. ಕಾರಣ ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಅತ್ಯಾಚಾರದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಾನೂನಿನಂತೆ ಶಿಕ್ಷೆ ವಿಧಿಸಬೇಕು ಮತ್ತು ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಸರಕಾರಕ್ಕೆ ಆದೇಶಿಸುವಂತೆ ವಿನಂತಿಸುತ್ತೇವೆ.

ರಾಜ್ಯದಲ್ಲಿ ಇದೇ ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಆತ್ಯಾಚಾರ ಮುಂದುವರೆದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಎಚ್ಚರಿಸಲಾಗಿದೆ. ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೇಸ್ ಮುಂಖಂಡರಾದ ಮಮತಾ ಶೇಟ್, ನಾಗವೇಣಿ ನಾಯ್ಕ, ಸೀಮಾ ಡೊಂಗ್ರಿ ಜರಾಸಿಯಾ, ಲಕ್ಷ್ಮಿ ನವಿಲಗೋಣ, ಪರಿನಾ ಶಾ, ಸಾವಿತ್ರಿ ಸ್ವಾಮಿ, ಶೋಭಾ ನಾಯ್ಕ, ನೀಲಾ ಹರಿಕಾಂತ, ಸೇವಂತಿ ಪಟಗಾರ, ಜ್ಯೋತಿ ಪಟಗಾರ, ಶ್ಯಾಮಲಾ ಗೌಡ, ನೂತನ ಪಂಡಿತ, ರಾಧ ಹರಿಕಾಂತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*