ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಎನ್.ಇ.ಪಿ ಹೆಲ್ಪಡೆಸ್ಕ ಉದ್ಘಾಟನೆ.

ವರದಿ- ಜೀವೋತ್ತಮ್ ಪೈ, ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ್

ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ನ್ನು ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಅಳವಡಿಸಲಾಗಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜಿತ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ಪಾಲಕರಿಗೆ ಎನ್.ಇ.ಪಿ ಮಾಹಿತಿಯನ್ನು ನೀಡಲು ಹೆಲ್ಪಡೆಸ್ಕ್ ಉದ್ಘಾಟಸಲಾಯಿತು. ಎಸ್.ಜಿ.ಎಸ್ – ಎನ್.ಇ.ಪಿ ಬ್ಲಾಗನ್ನು ಲೋಕಾರ್ಪಣೆ ಮಾಡುವ ಮುಖೇನ ಉದ್ಘಾಟಿಸಿದ ಅಧ್ಯಕ್ಷರಾದ ಡಾ. ಸುರೇಶ ನಾಯಕರವರು ಸರ್ವರೂ ಎನ್.ಇ.ಪಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

CHETAN KENDULI

ಪ್ರಾಂಶುಪಾಲರಾದ ಶ್ರೀನಾಥ ಪೈ ಮಾತನಾಡಿ ಕರ್ನಾಟಕ ವಿಶ್ವವಿದ್ಯಾಲಯವು ನೂತನವಾಗಿ ಹೆಲ್ಪಲೈನ ಸಹಾಯವಾಣಿಯನ್ನು ತೆರೆದಿದ್ದು ಶಿಕ್ಷಕವೃಂದದವರು ಪ್ರವೇಶ ಪ್ರಕ್ರಿಯೆ ಹಾಗೂ ಇತರೆ ಮಾಹಿತಿಯನ್ನು ಈ ಮೂಲಕ ಪಡೆಯುವಂತೆ ತಿಳಿಸಿದರು.

ಹೆಲ್ಪಡೆಸ್ಕ ಸಂಯೋಜಕರಾದ ಓಂಕಾರ ಮರಬಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ವಿದ್ಯಾಥರ್ಿಗಳಿಗೆ ಉಪಪ್ರಾಂಶುಪಾಲರು ಎನ್.ಇ.ಪಿ ಲಿಂಕ್ ಕಾರ್ಡ ವಿತರಿಸಿದರು. ಉಪನ್ಯಾಸಕರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*