ಜಿಲ್ಲಾ ಸುದ್ದಿಗಳು
ನಿಡಗುಂದಿ
ರಾಷ್ಟ್ರೀಯತೆ ಸಾರುವ ಹಿಂದೂಗಳ ಹಬ್ಬವೂ ಆಗಿರುವ ಗಣೇಶಶೋತ್ಸವ ಆಚರಣೆಗೆ ರಾಜ್ಯ ಸರಕಾರ ಯಾವುದೇ ಅಡೆತಡೆ ಮಾಡಬಾರದು ಎಂದು ಸಾರ್ವಜನಿಕ ಗಣೇಶಶೋತ್ಸವ ಮಂಡಳಿಯವರು ತಹಸೀಲ್ದಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ದೇಶದ ಸ್ವಾತಂತ್ರೋತ್ಸವದ ಪಡೆಯುವಲ್ಲಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಏಕಕಾಲಕ್ಕೆ ಆಚರಣೆಯನ್ನು ಮಾಡಿ ಬ್ರಿಟಿಷರಿಗೆ ದೇಶದ ಒಗ್ಗಟ್ಟು ಪ್ರದರ್ಶನ ನೀಡುವಲ್ಲಿ ಗಣೇಶ ಹಬ್ಬವೂ ಬಹುಮುಖ್ಯ ಪತ್ರ ವಹಿಸಿದ ಹಬ್ಬವಾಗಿದೆ ಎನ್ನುವುದು ಯಾರೂ ಮರೆಯುವಂತಿಲ್ಲ.
ಇಂತಹ ಹಬ್ಬಕ್ಕೆ ಸರಕಾರ ಸಾರ್ವಜನಿಕವಾಗಿ ಆಚರಣೆಯನ್ನು ಮಾಡುವಲ್ಲಿ ನಿಭದನೆ ಮಾಡುವುದು ದೇಶದ ಹಿಂದುಗಳಿಗೆ ನೋವು ತಂದಂತಾಗಿದೆ. ಆದ್ದರಿಂದ ಕೂಡಲೇ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರಕಾರದ ನಿಯಮ ಪಾಲನೆ :
ಕೊರೊನಾ ಸಂಕಷ್ಟ ಇಡೀ ಜಗತ್ತಿಗೆ ಎದುರಾಗಿದೆ. ಇದರ ಬಗ್ಗೆ ಸರಕಾರ ಯಾವುದೇ ನಿಯಮಗಳನ್ನು ಪಾಲಿಸಲು ಹೇಳಿದರೂ ಅದಕ್ಕೆ ಮಂಡಳಿಯವರು ಸದಾ ಸಿದ್ದರಿರುತ್ತಾರೆ. ಆದರೆ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಮಂಡಳಿಯ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ನಿಡಗುಂದಿ ಸಾರ್ವಜನಿಕರು ಶಿವಾನಂದ ಅವಟಿ,ರೋಹಿತ ಜನಗೊಂಡ, ಸಂತೋಷ ಕಡಿ,ಬಸು ಗೌರಿ,ಶ್ರೀಧರ್ ಉಕ್ಕಲಿ ಉಪಸ್ಥಿತರಿದ್ದರು
Be the first to comment