ಚನ್ನೈ ಬೀದಿಗಳಲ್ಲಿ ಅಲೆಯುತ್ತಿದ ಹುಚ್ಚ ವೆಂಕಟ್ ಪತ್ತೆಹಚ್ಚಿದ ರಾಂಧವ ಚಿತ್ರ ತಂಡ 

ಸಿನಿಮಾ ಸುದ್ದಿಗಳ ನಿಸಿನಿಮಿ ಪ್ರಸಂಗ


  ಸಿನಿಮಾ- ಮನರಂನೆ


ರಾಂಧವ ಚಿತ್ರ ತಂಡದಿಂದ ಹುಚ್ಚಾ ವೆಂಕಟ್ ಪತ್ತೆ, ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ

ಚೆನ್ನೈ: ಚೆನ್ನೈನ ಬೀದಿಗಳಲ್ಲಿ #39;ಹುಚ್ಛ #39;ನಂತೆ ಅಲೆಯುತ್ತಿದ್ದ ನಟ ವೆಂಕಟ್, ಕೊನೆಗೂ ಪತ್ತೆಯಾಗಿದ್ದಾರೆ.ಹೌದು.. ನಿನ್ನೆಯಷ್ಟೇ ಚೆನ್ನೈ ನ ಬೀದಿಗಳಲ್ಲಿ ಚಪ್ಪಲಿ ಇಲ್ಲದೇ, ಹರಿದು ಹೋದ ಬಟ್ಟೆಗಳನ್ನು ಧರಿಸಿ ಅಲೆದಾಡುತ್ತಿದ್ದ ನಟ ಹುಚ್ಚಾ ವೆಂಕಟ್ ಕುರಿತ ವಿಡಿಯೋ ವೈರಲ್ ಆಗಿತ್ತು. ನಟ ಭುವನ್ ಪೊನ್ನಣ್ಣ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ವೆಂಕಟ್ ರನ್ನು ರಕ್ಷಿಸುವಂತೆ ಕೇಳಿದ್ದರು. ಅಲ್ಲದೆ ಅವರು ಚೆನ್ನೈನಲ್ಲಿ ಎಲ್ಲಿದ್ದಾರೆ ಎಂದು ಹುಡುಕಿ ಅವರಿಗೆ ನೆರವಾಗುವಂತೆ ತಮ್ಮ ರಾಂಧವ ಚಿತ್ರತಂಡದ ಸದಸ್ಯರಿಗೆ ಮನವಿ ಮಾಡಿದ್ದರು.

ಇದೀಗ ಭುವನ್ ಮನವಿಯಂತೆ ರಾಂಧವ ಚಿತ್ರತಂಡದ ಸದಸ್ಯರು ಚೆನ್ನೈನ ವಡಪಳ್ಳಿಯಲ್ಲಿ ಹುಚ್ಚಾ ವೆಂಕಟ್ ರನ್ನು ಪತ್ತೆ ಮಾಡಿದ್ದು, ಅಲ್ಲಿಯೇ ಅವರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ನಟ ಭುವನ್ ಅವರ ಅಧಿಕೃತ ಫೇಸ್ ಬುಕ್ ಖಾತೆ #39;ರಾಂಧವ ಭುವನ್ ಪೊನ್ನಣ್ಣ #39; ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.

 ಅಲ್ಲದೆ ಹುಚ್ಚಾ ವೆಂಕಟ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡುವಂತೆ ಭುವನ್ ಚೆನ್ನೈನಲ್ಲಿರುವ ತಮ್ಮ ಚಿತ್ರತಂಡಕ್ಕೆ ಮನವಿ ಮಾಡಿದ್ದರು.

 

Be the first to comment

Leave a Reply

Your email address will not be published.


*