ದೇಶದ ಸಂವಿಧಾನದ ೩ ಅಂಗಗಳ ಜೊತೆಗೆ ೪ನೇ ಅಂಗ ಎನ್ನಿಸಿಕೊಂಡಿರುವ ಮಧ್ಯಮವೂ ಕಲುಷಿತಗೊಂಡಿದೆ ಎನ್ನುವುದಕ್ಕೆ ವಿಷಾಧಿಸುತ್ತೇನೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ ಹೇಳಿದರು.
ಇಲ್ಲಿನ ಹುಡ್ಕೋದಲ್ಲಿರುವ ಟಾಪ್ ಇನ್ ಟೌನ್ ಕನ್ವೆನ್ಷನ್ ಹಾಲ್ನಲ್ಲಿ ಶುಕ್ರವಾರ ಕೆಜೆಯೂ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ರಾಜಕೀಯ ಬೆಳವಣಿಗೆ ಶಾಸಕಾಂಗದಲ್ಲಿ ಏನು ನಡೆಯುತ್ತಿದೆ ಎನುವುದಕ್ಕೆ ಸಾಕ್ಷಿಯಾಗಿದೆ. ಸರಕಾರ ಹುದ್ದೆಗಳಿಗೆ ಲಂಚ ನೀಡಿ ಬಂದವನು ಬೇರೊಬ್ಬರಿಂದ ಲಂಚ ಪಡೆಯುವ ಪ್ರವೃತ್ತಿ ಬೆಳಿಸಿಕೊಳ್ಳುತ್ತಾನೆ. ಇಂತಹ ಸ್ಥಿತಿ ಮಾಧ್ಯದಲ್ಲಿಯೂ ಪೇಡ್ ನ್ಯೂಸ್ಗಳ ಮೂಲಕ ನಡೆಯುತ್ತಿವೆ. ಬ್ಲ್ಯಾಕ್ಮೇಲ್ ಪದ್ಧತಿ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಮಾತ್ರ ಮುಂದೆ ಇವುಗಳ ಮೇಲೆ ವಿಶ್ವಾಸ ಉಳಿದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಪೇಡ್ ನ್ಯೂಸ್ ಮತ್ತು ಬ್ಲಾಕ್ಮೇಲ್ ಬಗ್ಗೆ ಮಾಧ್ಯ ಗಮನಹರಿಸಬೇಕಿದೆ:
ಪೇಡ್ ನ್ಯೂಜ್, ಬ್ಲ್ಯಾಕ್ಮೇಲ್ ಹಾವಳಿಯನ್ನು ಮಾಧ್ಯಮ ಬಹಳ ಗಂಭೀರವಾಗಿ ಪರಿಗಣಿಸಬೇಕು. ಜನರು ತನ್ನಲ್ಲಿ ಇಟ್ಟ ಅಭಿಮಾನ, ಗೌರವ, ನಂಬಿಕೆಗಳಿಗೆ ಇಂಥವುಗಳಿಂದ ಧಕ್ಕೆ ಬರದಂತೆ ದಿಟ್ಟ ನಿರ್ಣಯ ತೆಗೆದುಕೊಳ್ಳಬೇಕು. ಸತ್ಯವನ್ನು ಒಪ್ಪಲೇಬೇಕು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು. ಮಾಧ್ಯಮದವರಿಗೆ ಜವಾಬ್ಧಾರಿ ಇರಬೇಕು. ಪ್ರಶಸ್ತಿಗಳು ಅದನ್ನು ಪಡೆಯುವಂಥ ಉತ್ತಮ ವ್ಯಕ್ತಿಗಳ ಕಾರ್ಯಕ್ಕೆ ಮೀಸಲಾಗಿರಬೇಕೆ ಹೊರತು ಬೇರೆ ಕಾರಣಕ್ಕೆ ಪ್ರಶಸ್ತಿ ಕೊಡಬಾರದು ಎಂದು ಮಾರ್ಮಿಕವಾಗಿ ಹೇಳಿದ ಅವರು, ಒಳ್ಳೇಯವರು, ಜನರ ಪ್ರೀತಿಗೆ ಪಾತ್ರರಾದವರನ್ನು ಗುರ್ತಿಸಿ ಸನ್ಮಾನಿಸಿದರೆ ಅದು ಸನ್ಮಾನಿಸಿದ ಸಂಸ್ಥೆಯ ಗೌರವ ಎತ್ತರಮಟ್ಟಕ್ಕೆ ತಗೊಂಡು ಹೋಗುತ್ತದೆ ಎಂದು ನ್ಯಾ.ಹಗಡೆಯವರು ಕಿವಿ ಮಾತು ಹೇಳಿದರು.
ಎಂಎಲ್ಸಿ ಹಣಮಂತ ನಿರಾಣಿ, ಅರವಿಂದ ಜಮಖಂಡಿ, ಪ್ರಶಸ್ತಿ ಪುರಸ್ಕೃತರಾದ ಜಿ.ಎಸ್.ಕಮತರ, ಸುಕನ್ಯಾ ಮಾತನಾಡಿದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಎಂ.ಬಿ.ನಾವದಗಿ, ಮಲ್ಲಿಕಾರ್ಜುನ ಮದರಿ, ಡಾ.ಬಸವರಾಜ ಅಸ್ಕಿ, ಮಲ್ಲನಗೌಡ ಬಿರಾದಾರ, ಎಸ್.ಬಿ.ಚಲವಾದಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕ್ವಾರಿ, ಪವನ್ ಕುಲಕರ್ಣಿ, ಡಿ.ಸಿ.ಪಾಟೀಲ, ಬಿಇಒ ಎಸ್.ಡಿ.ಗಾಂಜಿ, ಮಲಕೇಂದ್ರಗೌಡ ಪಾಟೀಲ, ಜಿ.ಟಿ.ಘೋರ್ಪಡೆ, ಗಿರೀಶಗೌಡ ಪಾಟೀಲ, ಬಿ.ನಾರಾಯಣ, ಅಬ್ದುಲ್ಹಕೀಮ್ ಇನ್ನಿತರರು ವೇದಿಕೆಯಲ್ಲಿದ್ದರು.
ಸಾಧಕ ಹಾಗೂ ಮಾಧ್ಯಮ ರತ್ನ ಪ್ರಶಸ್ತಿ ಪ್ರಧಾನ:
ವಿಜಯಪುರ ಜಿಲ್ಲಾ ಉದಯವಾಣಿ ವರದಿಗಾರ ಹಾಗೂ ಹಿರಿಯ ಪತ್ರಕರ್ತ ಜಿ.ಎಸ್.ಕಮತರ ಅವರಿಗೆ ದಿ.ಡಾ.ನಾಗರಾಜ ಜಮಖಂಡಿ ಸ್ಮರಣಾರ್ಥ ಸಾಧಕ ರತ್ನ ಪ್ರಶಸ್ತಿ ಹಾಗೂ ಬೆಂಗಳೂರಿನ ಟಿವಿ೯ ನಿರೂಪಕಿ ಸುಕನ್ಯಾ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನೀಡಲಾಯಿತು. ಇದೇ ವೇಳೆ ಜಿಲ್ಲೆಯ ಪತ್ರಕರ್ತರಾದ ಪಿ.ವಿ.ಮಮದಾಪುರ, ಗುರುರಾಜ ಹೂಗಾರ, ಶುಭಾ ಹತ್ತಳ್ಳಿ ಸೇರಿ ೧೧ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಪುಂಡಲಿಕ ಮುರಾಳ ಸ್ವಾಗತಿಸಿದರು. ನಾರಾಯಣ ಮಾಯಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎನ್.ಹೂಗಾರ ಮತ್ತು ಶ್ರೀಶೈಲ ಹೂಗಾರ ನಿರೂಪಿಸಿದರು. ಯೂನಿಯನ್ ತಾಲೂಕಾಧ್ಯಕ್ಷ ಮಂಜುನಾಥಸ್ವಾಮಿ ಕುಂದರಗಿ ವಂದಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ:
ಕಾರ್ಯಕ್ರಮಕ್ಕೂ ಮುನ್ನ ನ್ಯಾ.ಸಂತೋಷ ಹೆಗಡೆ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ಎಂಜಿವಿಸಿ ಕಾಲೇಜಿನ ಪ್ರೊ.ಎಸ್.ಎಸ್.ಹೂಗಾರ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಮತ್ತಿತರರು ವೇದಿಕೆಯಲ್ಲಿದ್ದರು. ಶ್ರೀಶೈಲ ಹೂಗಾರ, ಸಿದ್ದು ಹೆಬ್ಬಾಳ ನಿರೂಪಿಸಿದರು.
Be the first to comment