ಸಂಮಿಶ್ರ ಸರ್ಕಾರ ಪತನಕ್ಕೆ ಗೌಡರ ಫ್ಯಾಮಿಲಿ ಕಾರಣ :: ಸಿದ್ದು ಜೆಡಿಎಸಗೆ ಗುದ್ದು

ರಾಜ್ಯ ರಾಜಕೀಯ ಸುದ್ದಿಗಳು


      ರಾಜಕೀಯ ಸುದ್ದಿಗಳು


ಹೆಚ್.ಡಿ. ಕುಮಾರಸ್ವಾಮಿ ರೇವಣ್ಣ, ದೇವೇಗೌಡರೇ ಸಂಮಿಶ್ರ ಸರ್ಕಾರ ಪತನಕ್ಕೆ ಕಾರಣ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನ್ನ ಮೇಲೆ ಮಾಡಿರುವ ಆರೋಪಗಳು ಆಧಾರ ರಹಿತವಾದದ್ದು, ರಾಜಕೀಯ ದುರುದ್ದೇಶದಿಂದ ಮಾಡಿರುವಂತಹ ಸುಳ್ಳು ಆರೋಪಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನಕ್ಕೆ ಹೆಚ್.ಡಿ. ಕುಮಾರಸ್ವಾಮಿ ರೇವಣ್ಣ, ದೇವೇಗೌಡರೇ ಕಾರಣ , ಎಲ್ಲಾ ಶಾಸಕರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ್ದರೆ, ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ. ಏಕಪಕ್ಷೀಯ ನಿರ್ಧಾರ, ಶಾಸಕರು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದರು.

ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೈಕಮಾಂಡ್ ನಿರ್ಧಾರದಂತೆ ನಾವು 80 ಶಾಸಕರಿದ್ದರೂ ಸಹ 37 ಶಾಸಕರಿರುವ ಜೆಡಿಎಸ್ ಗೆ ಬೆಂಬಲ ಕೊಡೋಣ ಎಂದು ಹೇಳಿದಾಗ ಮರು ಮಾತನಾಡದೇ ಒಪ್ಪಿಕೊಂಡಿದ್ದೇನೆ.

14 ತಿಂಗಳೂ ಸಂಪೂರ್ಣ ಸಹಕಾರವನ್ನೂ ಕೊಟ್ಟಿದ್ದೇನೆ. ಯಾವತ್ತೂ ಕೂಡ ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು

ಇಂದು ದೇಶದಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರದಲ್ಲಿದೆ. ಅವರು ಕಳೆದ 5 ವರ್ಷಗಳಿಂದ ಬಂದ ಮೇಲೆ ಎಲ್ಲ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕಾರ್ಯ ಮಾಡಿ, ಪ್ರಜಾಪ್ರಭುತ್ವ ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಎಲ್ಲ ಜಾತ್ಯತೀತ ರಾಜಕೀಯ ಪಕ್ಷಗಳು ಒಗ್ಗಾಟಾಗಿ, ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಅವಶ್ಯಕತೆ ಇದೆ. ಸಂಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷನಾಗಿ ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದೆನೆ ನಾನು ಭವಿಷ್ಯದಲ್ಲಿ ಜಾತ್ಯಾತೀತ ಶಕ್ತಿಗಳನ್ನು ಒಂದುಗೂಡಿಸಿ ಕೋಮುವಾದಿ ಶಕ್ತಿಯನ್ನು ಎದುರಿಸುವ ನಂಬಿಕೆ ಇಟ್ಟಿದ್ದೇನೆ ಎಂದರು.

Be the first to comment

Leave a Reply

Your email address will not be published.


*